ADVERTISEMENT

ಹುಟ್ಟೂರಲ್ಲಿ ಯೋಧನ ಅಂತ್ಯಕ್ರಿಯೆ ಇಂದು

​ಪ್ರಜಾವಾಣಿ ವಾರ್ತೆ
Published 11 ಜೂನ್ 2013, 8:35 IST
Last Updated 11 ಜೂನ್ 2013, 8:35 IST

ಚನ್ನರಾಯಪಟ್ಟಣ: ಜಮ್ಮುವಿನ ಸಿಯಾಚಿನ್ ಪ್ರದೇಶದಲ್ಲಿ ಮೃತಪಟ್ಟ ಹವಾಲ್ದಾರ್ ಸಿ.ಯೋಗಾನಂದ ಅಂತ್ಯಕ್ರಿಯೆ ಜೂನ್ 11 (ಮಂಗಳವಾರ) ತಾಲ್ಲೂಕಿನ ಅಗ್ರಹಾರ ಗ್ರಾಮದಲ್ಲಿ ನಡೆಯಲಿದೆ.

ಜಮ್ಮು ಪ್ರದೇಶದಿಂದ ಬೆಂಗಳೂರಿಗೆ ಸೋಮವಾರ ರಾತ್ರಿ 7.30ಕ್ಕೆ ವಿಮಾನದಲ್ಲಿ ಪಾರ್ಥಿವ ಶರೀರ ತರಲಾಯಿತು. ಮಂಗಳವಾರ ಮುಂಜಾನೆ ಬೆಂಗಳೂರಿನಿಂದ ಪಾರ್ಥಿವ ಶರೀರ ಹೊತ್ತ ವಾಹನ ಬೆಳಿಗ್ಗೆ 7 ಗಂಟೆಗೆ ಪಟ್ಟಣಕ್ಕೆ ಆಗಮಿಸಲಿದೆ. ಆ ನಂತರ ಹಾಸನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪಾರ್ಥಿವ ಶರೀರ ಇರಿಸಲಾಗುವುದು.

ಶಾಂತಿಗ್ರಾಮ, ದೊಡ್ಡಕರಡೆ ಗ್ರಾಮದ ಮೂಲಕ ಪಾರ್ಥಿವ ಶರೀರವನ್ನು ಸ್ವಗ್ರಾಮ ಅಗ್ರಹಾರಕ್ಕೆ ತಂದು ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಗುವುದು.

ಈ ಬಗ್ಗೆ ಸೇನೆಯ ಅಧಿಕಾರಿಗಳು ಕುಟುಂಬದ ಸದಸ್ಯರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.