ADVERTISEMENT

10 ಸಾವಿರ ಸನಿಹ ಸಕ್ರಿಯ ಪ್ರಕರಣ

​ಪ್ರಜಾವಾಣಿ ವಾರ್ತೆ
Published 4 ಮೇ 2021, 13:25 IST
Last Updated 4 ಮೇ 2021, 13:25 IST

ಹಾಸನ: ಲಾಕ್‌ಡೌನ್ ಜಾರಿಯಾಗಿ ವಾರ ಕಳೆದರೂ ಕೋವಿಡ್‌ ಪ್ರಕರಣ ಏರುಗತಿಯಲ್ಲೇ ಸಾಗುತ್ತಿದೆ. ಮಂಗಳವಾರ ಒಂದೇ ದಿನ 2656 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಚಿಕಿತ್ಸೆಗೆ ಸ್ಪಂದಿಸದೆ 5 ಮಂದಿ ಮೃತಪಟ್ಟಿದ್ದಾರೆ.

ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 44969ಕ್ಕೇ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 621 ತಲುಪಿದೆ.
796 ಜನರ ಬಿಡುಗಡೆಯೊಂದಿಗೆ 34,398 ಜನರ ಆರೋಗ್ಯದಲ್ಲಿ ಚೇತರಿಕೆಯಾಗಿದ್ದು, 9954 ಸಕ್ರಿಯ ಪ್ರಕರಣಗಳಿವೆ. 94 ಸೋಂಕಿತರು ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೊಸದಾಗಿ ಆಲೂರು ತಾಲ್ಲೂಕು 139, ಅರಕಲಗೂಡು 299, ಅರಸೀಕೆರೆ 502, ಬೇಲೂರು 183, ಚನ್ನರಾಯಪಟ್ಟಣ 384, ಹಾಸನ 495, ಹೊಳೆನರಸೀಪುರ 439, ಸಕಲೇಶಪುರ 204, ಇತರೆ ಜಿಲ್ಲೆಯ 11 ಮಂದಿಗೆ ಸೋಂಕು ತಗುಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.