ADVERTISEMENT

ಕೊಣನೂರಿನ ಕ್ರೀಡಾ ಪ್ರತಿಭೆ ವಿಭಾ

ಬಿ.ಪಿ.ಗಂಗೇಶ್‌
Published 3 ಫೆಬ್ರುವರಿ 2018, 9:06 IST
Last Updated 3 ಫೆಬ್ರುವರಿ 2018, 9:06 IST

ಕೊಣನೂರು: ಕೊಣನೂರಿನ ಪ್ರತಿಭೆ ವಿಭಾ ಶ್ರೀನಿವಾಸ್ ಮಹಾರಾಷ್ಟ್ರದ ರತ್ನಗಿರಿಯಲ್ಲಿ ಈಚೆಗೆ ನಡೆದ 14 ವರ್ಷ ಒಳಪಟ್ಟ 2017– 18ನೇ ಸಾಲಿನ 63ನೇ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಉದ್ದಜಿಗಿತದಲ್ಲಿ ಮೂರನೇ ಸ್ಥಾನ ಗಳಿಸುವ ಮೂಲಕ ಕೀರ್ತಿ ತಂದಿದ್ದಾಳೆ.

4.85 ಮೀ ಉದ್ದ ಜಿಗಿಯುವ ಮೂಲಕ ಮೂರನೇ ಸ್ಥಾನ ಪಡೆದಿರುವ ವಿಭಾ ಕೊಣನೂರಿನ ಯಶೋದಾ ಮತ್ತು ಶ್ರೀನಿವಾಸ್ ದಂಪತಿ ಪುತ್ರಿ. ಪ್ರಸ್ತುತ ಬೆಂಗಳೂರಿನ ಅಶ್ವಿನಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದು, ಈಚೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಚನ್ನಭೈರೇಗೌಡ ಕ್ರೀಡಾಂಗಣದಲ್ಲಿ ನಡೆದ 14 ವರ್ಷ ಒಳಪಟ್ಟ ರಾಜ್ಯ ಮಟ್ಟದ ಶಾಲಾ ಮಕ್ಕಳ ಆಟೋಟಗಳ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಳು.

ಪ್ರಥಮ ಸ್ಥಾನ: ವಿಭಾ ಶ್ರೀನಿವಾಸ್ ಈಚೆಗೆ ಮೂಡುಬಿದರೆಯಲ್ಲಿ ಆಳ್ವಾಸ್ ಫೌಂಡೇಶನ್ ಹಾಗೂ ಕೆಎಎ ವತಿಯಿಂದ ನಡೆಸಿದ ಪಂದ್ಯಾವಳಿಯಲ್ಲಿ 4.97 ಮೀ ಉದ್ದ ಜಿಗಿದು ಪ್ರಥಮ ಸ್ಥಾನ ಪಡೆದಿದ್ದಾಳೆ. ಹಿಂದಿನ ವರ್ಷಗಳಲ್ಲಿಯೂ ಉತ್ತಮ ಸಾಧನೆಗಳನ್ನು ಮಾಡುವ ಮೂಲಕ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾಳೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.