ADVERTISEMENT

ಹಾಸನ | 9 ಜನರ ಮೇಲೆ ಬೀದಿ ನಾಯಿ ದಾಳಿ

​ಪ್ರಜಾವಾಣಿ ವಾರ್ತೆ
Published 25 ಮೇ 2024, 15:20 IST
Last Updated 25 ಮೇ 2024, 15:20 IST
ನಾಯಿ ದಾಳಿಯಿಂದ ಗಾಯಗೊಂಡಿರುವವರು ಹಾಸನದ ಹಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಾಯಿ ದಾಳಿಯಿಂದ ಗಾಯಗೊಂಡಿರುವವರು ಹಾಸನದ ಹಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.   

ಹಾಸನ: ಇಲ್ಲಿನ ಸಿದ್ದಯ್ಯನಗರ ಬಡಾವಣೆಯಲ್ಲಿ ಬೀದಿ ನಾಯಿಯೊಂದು ಮಹಿಳೆಯರು, ಮಕ್ಕಳು ಸೇರಿದಂತೆ ಸಿಕ್ಕವರ ಮೇಲೆ ಎರಗಿ ಅಟ್ಟಾಡಿಸಿ ಕಚ್ಚಿದ್ದರಿಂದ 9 ಜನರು ಗಾಯಗೊಂಡಿದ್ದಾರೆ.

ಸಿದ್ದಯ್ಯನಗರದ ರಸ್ತೆಗಳಲ್ಲಿ ಬೇಕಾಬಿಟ್ಟಿ ಓಡಾಡಿದ ಬೀದಿನಾಯಿ ಜನರ ಮೇಲೆ ದಾಳಿ ಮಾಡಲಾರಂಭಿಸಿತು. ಜನರು ಅದರಿಂದ ತಪ್ಪಿಸಿಕೊಳ್ಳುವಷ್ಟರಲ್ಲಿ ಅದು ಕಚ್ಚಿ ಗಾಯಗೊಳಿಸಿತು.

ಒಂದು ರಸ್ತೆಯಲ್ಲಿ ಜನರು ದೊಣ್ಣೆ ಹಿಡಿದು ಓಡಿಸಿದರೆ, ಮತ್ತೊಂದು ರಸ್ತೆಗೆ ಓಡಿ ಅಲ್ಲಿ ಪಾದಚಾರಿಗಳ ಮೇಲೆ ದಾಳಿ ಮಾಡಿ ಪರಾರಿಯಾಗುತ್ತಿತ್ತು. ಜನರು ಬೆನ್ನತ್ತಿದರೂ ಸಿಗದೇ ತಪ್ಪಿಸಿಕೊಂಡು ಓಡಿದ ನಾಯಿ, 9 ಜನರನ್ನು ಗಾಯಗೊಳಿಸಿದೆ. ಗಾಯಾಳುಗಳು ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ದಾಳಿ ಮಾಡಿದ ನಾಯಿಗೆ ರೇಬಿಸ್ ಸೋಂಕು ತಗುಲಿರುವ ಭೀತಿಯಿದ್ದು, ಹುಚ್ಚುನಾಯಿ ಕಡಿತದಿಂದ ಗಾಯಾಳುಗಳೂ ಭೀತಿ ಎದುರಿಸುವಂತಾಗಿದೆ.

ನಾಯಿ ದಾಳಿಯಿಂದ ಗಾಯಗೊಂಡಿರುವವರು ಹಾಸನದ ಹಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.