ADVERTISEMENT

ಕೋಲಾರದ ಅಚ್ಯುತ್‌ಗೆ ಕರೀಂಖಾನ್‌ ಸೌಹಾರ್ದ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 7:04 IST
Last Updated 28 ಜನವರಿ 2026, 7:04 IST
ಅಚ್ಯುತ ಕೆಜಿಎಫ್
ಅಚ್ಯುತ ಕೆಜಿಎಫ್   

ಸಕಲೇಶಪುರ (ಹಾಸನ): ತಾಲ್ಲೂಕಿನ ಬೆಳ್ಳೇಕೆರೆ ಜೈ ಕರ್ನಾಟಕ ಸಂಘವು ನೀಡುವ ರಾಜ್ಯಮಟ್ಟದ ‘ಡಾ.ಎಸ್‌.ಕೆ. ಕರೀಂಖಾನ್ ಸೌಹಾರ್ದ ಪ್ರಶಸ್ತಿ’ಗೆ ಕೆಜಿಎಫ್‌ನ ಅಚ್ಯುತ ಅವರನ್ನು ಆಯ್ಕೆ ಮಾಡಲಾಗಿದೆ.

ಅಮೃತಾ ರಕ್ಷಿದಿ ನೆನಪಿನಲ್ಲಿ ನೀಡುವ ‘ಅಮೃತ ಕಾವ್ಯ ಪ್ರಶಸ್ತಿ’ಗೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಕೆರವಡಿ ಗ್ರಾಮದ ಮಧು ಕಾರಗಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ವಿನಯ್‌ ಗುಂಟೆ ಅವರನ್ನು ಆಯ್ಕೆ ಮಾಡಲಾಗಿದೆ. ಸೌಹಾರ್ದ ಪ್ರಶಸ್ತಿಯು ₹10 ಸಾವಿರ ನಗದು ಹಾಗೂ ಕಾವ್ಯ ಪ್ರಶಸ್ತಿಯು ₹ 5 ಸಾವಿರ ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. 

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ್‌ ಬಿಳಿಮಲೆ ಹಾಗೂ ಡಾ. ಎಚ್‌.ಎಸ್. ಅನುಪಮಾ ಅವರನ್ನು ಒಳಗೊಂಡ ಸಮಿತಿ ಈ ಆಯ್ಕೆ ಮಾಡಿದೆ.

ADVERTISEMENT

ಫೆ.28ರಂದು ಬೆಳ್ಳೇಕೆರೆ ಗ್ರಾಮದ ಪೂರ್ಣಚಂದ್ರ ತೇಜಸ್ವಿ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ರಂಗಕರ್ಮಿ ಪ್ರಸಾದ್ ರಕ್ಷಿದಿ ಹಾಗೂ ಕವಿ ಸುಬ್ಬು ಹೊಲೆಯಾರ್‌ ತಿಳಿಸಿದ್ದಾರೆ.

ವಿನಯ್‌ಗುಂಟೆ
ಮಧು ಕಾರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.