ADVERTISEMENT

ಸಾವಿರ ದಾಟಿದ ಸಕ್ರಿಯ ಪ್ರಕರಣ

167 ಮಂದಿಗೆ ಕೊರೊನಾ ಸೋಂಕು ಪತ್ತೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 13:42 IST
Last Updated 11 ಏಪ್ರಿಲ್ 2021, 13:42 IST

ಹಾಸನ: ಮೂರು ತಿಂಗಳ ಬಳಿಕ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣ ನೂರೈವತ್ತರ ಗಡಿ ದಾಟಿದೆ. ಭಾನುವಾರ 167 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 30,572ಕ್ಕೆ ಏರಿಕೆಯಾಗಿದೆ.

1001 ಸಕ್ರಿಯ ಪ್ರಕರಣಗಳ ಪೈಕಿ 12 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಯಿಲೆಯಿಂದ ಈವರೆಗೆ 479 ಮಂದಿ ಅಸುನೀಗಿದ್ದಾರೆ. ಸೋಂಕಿತರು ವಿವಿಧ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಾನುವಾರ ಬಿಡುಗಡೆಯಾದ 78 ಮಂದಿ ಸೇರಿದಂತೆ ಈವರೆಗೆ 29,092 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ADVERTISEMENT

ಹೊಸದಾಗಿ ಆಲೂರು 3, ಅರಕಲಗೂಡು 11, ಅರಸೀಕೆರೆ 19, ಬೇಲೂರು 6, ಚನ್ನರಾಯಪಟ್ಟಣ 28, ಹಾಸನ 84, ಹೊಳೆನರಸೀಪುರ 7, ಸಕಲೇಶಪುರ 8 ಹಾಗೂ ಇತರೆ ಜಿಲ್ಲೆಯ ಒಬ್ಬರಿಗೆ ಸೋಂಕು ಪತ್ತೆಯಾಗಿದೆ. ಜ್ವರ, ಕೆಮ್ಮು, ಶೀತ ಲಕ್ಷಣ ಹೊಂದಿರುವರು ಸಮೀಪದ ಆರೋಗ್ಯ ಕೇಂದ್ರದಲ್ಲಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್‌ ಧರಿಸಿಬೇಕು ಮತ್ತು ಅಂತರ ಪಾಲನೆ ಮಾಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಸತೀಶ್‌ ಕುಮಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.