ADVERTISEMENT

ಅರಕಲಗೂಡು: ಬ್ಯಾಂಕ್ ಸೌಲಭ್ಯ ಬಳಸಿಕೊಳ್ಳಲು ಸಲಹೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 15:18 IST
Last Updated 14 ಜೂನ್ 2025, 15:18 IST
ಅರಕಲಗೂಡು ಎಸ್‌ಬಿಐ ಬ್ಯಾಂಕಿನಲ್ಲಿ ನಡೆದ ಗ್ರಾಹಕರ ಸಭೆಯಲ್ಲಿ ಶಾಖಾ ವ್ಯವಸ್ಥಾಪಕ ಅನಿಲ್ ಮಾತನಾಡಿದರು. ಕ್ಷೇತ್ರಾಧಿಕಾರಿ ಮಂಜುನಾಥ್, ಲೆಕ್ಕಾಧಿಕಾರಿ ಮಾಲಿನಿ ಇದ್ದಾರೆ 
ಅರಕಲಗೂಡು ಎಸ್‌ಬಿಐ ಬ್ಯಾಂಕಿನಲ್ಲಿ ನಡೆದ ಗ್ರಾಹಕರ ಸಭೆಯಲ್ಲಿ ಶಾಖಾ ವ್ಯವಸ್ಥಾಪಕ ಅನಿಲ್ ಮಾತನಾಡಿದರು. ಕ್ಷೇತ್ರಾಧಿಕಾರಿ ಮಂಜುನಾಥ್, ಲೆಕ್ಕಾಧಿಕಾರಿ ಮಾಲಿನಿ ಇದ್ದಾರೆ    

ಅರಕಲಗೂಡು: ಎಸ್‌ಬಿಐ ಬ್ಯಾಂಕ್ ಹಲವು ಯೋಜನೆಗಳನ್ನು ಪ್ರಾರಂಭಿಸಿದ್ದು ಬ್ಯಾಂಕಿನ ಗ್ರಾಹಕರು ಇದರ ಉಪಯೋಗ ಪಡೆಯವಂತೆ ಶಾಖಾ ವ್ಯವಸ್ಥಾಪಕ ಅನಿಲ್ ತಿಳಿಸಿದರು.

ಬ್ಯಾಂಕಿನಲ್ಲಿ ಇತ್ತೀಚೆಗೆ ನಡೆದ ಗ್ರಾಹಕರ ಕುಂದು, ಕೊರತೆ ಸಭೆಯಲ್ಲಿ ಮಾತನಾಡಿ, ಸಾಲ ಪಡೆದ ಗ್ರಾಹಕರು ನಿಗದಿತ ಸಮಯದಲ್ಲಿ ಮರುಪಾವತಿ ಮಾಡಿದರೆ, ಬ್ಯಾಂಕ್ ಇನ್ನೂ ಹೆಚ್ಚಿನ ಸಾಲ ಸೌಲಭ್ಯಗಳನ್ನು ಒದಗಿಸುತ್ತದೆ. ವಿವಿಧ ಠೇವಣಿ ಯೋಜನೆಗಳಲ್ಲದೆ ಹೂಡಿಕೆ ಯೋಜನೆಗಳು, ವಿಮಾಸೌಲಭ್ಯಗಳು ಇದ್ದು ಇದನ್ನು ಗ್ರಾಹರು ಸಮರ್ಪಕವಾಗಿ ಬಳಸಿಕೊಂಡಲ್ಲಿ ಆರ್ಥಿಕವಾಗಿ ಲಾಭ ಪಡೆಯಬಹುದು. ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು ಗ್ರಾಹಕರು ಜಾಗೃತರಾಗಿರಬೇಕು ಎಂದು ಸಲಹೆ ಮಾಡಿದರು.

ಬ್ಯಾಂಕಿನ ಆವರಣದಲ್ಲಿರುವ ಎಟಿಎಂ ಅನ್ನು ಸಂಜೆ 6 ಗಂಟೆಗೆ ಮುಚ್ಚುತ್ತಿರುವ ಕಾರಣ ಗ್ರಾಹಕರಿಗೆ ಹಣ ಪಡೆಯಲು ತೊಂದರೆಯಾಗುತ್ತಿದೆ. ಇದನ್ನು ಕನಿಷ್ಠ ರಾತ್ರಿ 9 ಗಂಟೆವರೆಗೆ ವಿಸ್ತರಿಸಬೇಕು. ಬ್ಯಾಂಕಿಗೆ ಬರುವ ಹಿರಿಯ ನಾಗರಿಕರಿಗೆ ಆದ್ಯತೆ ಮೇಲೆ ಸೇವೆ ಒದಗಿಸಬೇಕು. ವಾಹನಗಳ ನಿಲುಗಡೆ ವ್ಯವಸ್ಥೆ ಸರಿಪಡಿಸುವಂತೆ ಗ್ರಾಹಕ ವಿರೂಪಾಕ್ಷ ಸಲಹೆ ಮಾಡಿದರು. ಕ್ಷೇತ್ರಾಧಿಕಾರಿ ಮಂಜುನಾಥ್, ಲೆಕ್ಕಾಧಿಕಾರಿ ಮಾಲಿನಿ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.