ಹೊಳೆನರಸೀಪುರ ತಾಲ್ಲೂಕು ಪೊಲೀಸ್ ಇಲಾಖೆ ಮಂಗಳವಾರ ಆಯೋಜಿಸಿದ್ದ ಮಾಧಕದ್ರವ್ಯ ವಿರೋಧಿ ದಿನಾಚರಣೆ ಮೆರವಣಿಗೆಗೆ ಡಿ.ವೈ.ಎಸ್.ಪಿ. ಶಾಲು ಚಾಲನೆ ನೀಡಿದರು.
ಹೊಳೆನರಸೀಪುರ: ‘ಮಾದಕ ವಸ್ತುಗಳ ವ್ಯಸನ ಇರುವವರು ಕುಟುಂಬದ ನೆಮ್ಮದಿಯೊಂದಿಗೆ ಮನೆಮಠವನ್ನು ಕಳೆದುಕೊಳ್ಳುತ್ತಾರೆ. ಯಾರೂ ವ್ಯಸನಿ ಆಗಬಾರದು’ ಎಂದು ಹೊಳೆನರಸೀಪುರ ಉಪ ವಿಭಾಗದ ಡಿವೈಎಸ್‌ಪಿ ಶಾಲೂ ಎಚ್ಚರಿಸಿದರು.
ಮಂಗಳವಾರ ಪೊಲೀಸ್ ಇಲಾಖೆ ಆಯೋಜಿಸಿದ್ದ ಮಾದಕ ದ್ರವ್ಯ ವಿರೋಧಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ‘ಗಾಂಜಾ, ಅಫೀಮು ಮಾರಾಟ ಮಾಡುತ್ತಿದ್ದರೆ ಪೊಲೀಸರಿಗೆ ತಿಳಿಸಿ. ಮಾಹಿತಿ ನೀಡಿದವರ ಹೆಸರನ್ನು ಗೋಪ್ಯವಾಗಿ ಇಡುತ್ತೇವೆ’ ಎಂದರು.
ತಹಶೀಲ್ದಾರ್ ರೇಣುಕುಮಾರ್ ಮಾತನಾಡಿ, ‘ ಭಂಗಿ(ಗಾಂಜಾ) ಸೊಪ್ಪನ್ನು ಬೆಳೆದು ಮಾರಾಟ ಮಾಡುವವರನ್ನು ಬಂಧಿಸಿ ಪೊಲೀಸರು ಕ್ರಮ ಜರುಗಿಸಿದ್ದಾರೆ. ಮಾಹಿತಿ ನೀಡಿ’ ಎಂದರು.
ನಗರಠಾಣೆ ಪಿಎಸ್‌ಐ. ಅಭಿಜಿತ್, ಗ್ರಾಮಾಂತರಠಾಣೆ ಪಿಎಸ್ ಎಸ್ಐ ರಮೇಶ್, ಕ್ಷೇತ್ರಶಿಕ್ಷಣಾಧಿಕಾರಿ ಸೋಮಲಿಂಗೇಗೌಡ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಮುನಿರಾಜು, ಪುರಸಭೆ ಅಧ್ಯಕ್ಷ ಪ್ರಸನ್ನ, ಆರೋಗ್ಯ ಇಲಾಖೆಯ ಸ್ವಾಮಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.