ಅರಕಲಗೂಡು: ಕಳೆದ ಕೆಲವು ದಿನಗಳಿಂದ ಬಿಡುವು ನೀಡಿದ್ದ ಮಳೆ ಮತ್ತೆ ಬಿರುಸು ಪಡೆದಿದ್ದು ಬುಧವಾರ ರಾತ್ರಿ ಸುರಿದ ಮಳೆಗೆ ತಾಲ್ಲೂಕಿನಲ್ಲಿ ಮೂರು ಮನೆಗಳಿಗೆ ಹಾನಿಯಾಗಿದೆ.
ವಿಜಾಪುರ ಅರಣ್ಯ ಗ್ರಾಮದ ಗಾಯಿತ್ರಿ, ಬಿಟ್ಟಗೋಡನಹಳ್ಳಿ ಗ್ರಾಮದ ಪದ್ಮಮ್ಮ, ಕೇರಳಾಪುರ ಗ್ರಾಮದ ಶಾರದಮ್ಮ ಎಂಬುವವರ ಮನೆಗಳ ಗೋಡೆ ಕುಸಿದು ಹಾನಿಯಾಗಿದೆ. ಹಾನಿ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸತತ ಮಳೆಯ ಪರಿಣಾಮ ಪ್ರಮುಖ ವಾಣಿಜ್ಯ ಬೆಳೆಗಳಾದ ತಂಬಾಕು ಮತ್ತು ಮುಸುಕಿನ ಜೋಳದ ಬೆಳೆಯಲ್ಲಿ ಬೆಳವಣಿಗೆ ಕುಂಠಿತವಾಗಿ ಇಳುವರಿ ಕಡಿಮೆಯಾಗುವ ಅಪಾಯ ಎದುರಾಗಿದೆ.
ಗುರುವಾರ ಬೆಳಿಗೆ 8.30ಕ್ಕೆ ಕೊನೆಗೊಂಡಂತೆ ತಾಲ್ಲೂಕಿನ ಮಳೆಮಾಪನ ಕೇಂದ್ರಗಳಲ್ಲಿ ದಾಖಲಾದ ಮಳೆ ವಿವರ ಹೀಗಿದೆ. ಅರಕಲಗೂಡು 1.62 ಸೆಂ.ಮೀ, ದೊಡ್ಡಮಗ್ಗೆ 3.8 ಸೆಂ.ಮೀ,ಮಲ್ಲಿಪಟ್ಟಣ 3.4 ಸೆಂ.ಮೀ, ರಾಮನಾಥಪುರ 2.3 ಸೆಂ.ಮೀ, ಕೊಣನೂರು, ಬಸವಾಪಟ್ಟಣದಲ್ಲಿ ತಲಾ 2.3 ಸೆಂ. ಮೀ, ದೊಡ್ಡಬೆಮ್ಮತ್ತಿಯಲ್ಲಿ 2.2 ಸೆಂ.ಮೀ ಮಳೆ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.