ಅರಸೀಕೆರೆ: ನಗರದ ಗ್ರಾಮದೇವತೆ ಕರಿಯಮ್ಮ ದೇವಿಗೆ ಮೊದಲ ಆಷಾಢ ಶುಕ್ರವಾರದಂದು ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.
ಭಕ್ತರು ದಿನವಿಡೀ ದೇವರ ದರ್ಶನ ಪಡೆದರು. ಮುಂಜಾನೆ ದೇವಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಹಾಗೂ ಪೂಜೆಗಳು ನಡೆದವು. ಅರ್ಚಕರಾದ ವಿನಯ್ ಹಾಗೂ ಬಸವರಾಜು ಅವರು ದೇವಿಗೆ ಬೆಣ್ಣೆ, ವಿವಿಧ ಬಗೆಯ ಹೂಗಳಿಂದ ಮಾಡಿದ್ದ ಅಲಂಕಾರ ಆಕರ್ಷಕವಾಗಿತ್ತು.
ಮಹಿಳೆಯರು ನಿಂಬೆಹಣ್ಣಿನ ಆರತಿ ಬೆಳಗಿ, ಹಣ್ಣು ಕಾಯಿ ಪೂಜೆ ಮಾಡಿಸಿ, ನೈವೇದ್ಯ ಅರ್ಪಿಸಿದರು.
‘ಆಷಾಢ ಮಾಸದಲ್ಲಿ ಶಕ್ತಿ ದೇವತೆಗಳ ಆರಾಧನೆ ಮಾಡಿದರೆ ಕುಟುಂಬವು ನೆಮ್ಮದಿ, ಆರೋಗ್ಯದಿಂದ ಇರುತ್ತದೆ. ಆದ್ದರಿಂದ ಪ್ರತಿ ವರ್ಷ ಆಷಾಢ ಮಾಸದಲ್ಲಿ ಸಹಸ್ರಾರು ಭಕ್ತರು ಈ ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ’ ಎಂದು ಅರ್ಚಕ ಬಸವರಾಜು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.