ADVERTISEMENT

ಹೊಳೆನರಸೀಪುರ: ಚಾಮುಂಡೇಶ್ವರಿದೇವಿ 13ನೇ ವರ್ಷದ ಆಷಾಢ ಪೂಜಾ ಮಹೋತ್ಸವ

ಬಾವಸಾರ ಕ್ಷತ್ರೀಯ ಸಮಾಜದಿಂದ ಆಯೋಜನೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 2:33 IST
Last Updated 16 ಜುಲೈ 2025, 2:33 IST
ಹೊಳೆನರಸೀಪುರ ಪಟ್ಟಣದ ಕುರುಹಿನಶೆಟ್ಟಿ ಕಲ್ಯಾಣ ಮಂದಿರದಲ್ಲಿ ಬಾವಸಾರ ಕ್ಷತ್ರೀಯ ಸಮಾಜದಿಂದ ಶ್ರೀಲಕ್ಷ್ಮಿ ಚಾಮುಂಡೇಶ್ವರಿದೇವಿ ಆಷಾಢ ಪೂಜಾ ಮಹೋತ್ಸವವನ್ನು ಅದ್ದೂರಿಯಾಗಿ ನೆರವೇರಿಸಿದರು.
ಹೊಳೆನರಸೀಪುರ ಪಟ್ಟಣದ ಕುರುಹಿನಶೆಟ್ಟಿ ಕಲ್ಯಾಣ ಮಂದಿರದಲ್ಲಿ ಬಾವಸಾರ ಕ್ಷತ್ರೀಯ ಸಮಾಜದಿಂದ ಶ್ರೀಲಕ್ಷ್ಮಿ ಚಾಮುಂಡೇಶ್ವರಿದೇವಿ ಆಷಾಢ ಪೂಜಾ ಮಹೋತ್ಸವವನ್ನು ಅದ್ದೂರಿಯಾಗಿ ನೆರವೇರಿಸಿದರು.   

ಹೊಳೆನರಸೀಪುರ: ಪಟ್ಟಣದ ಕುರುಹಿನಶೆಟ್ಟಿ ಕಲ್ಯಾಣ ಮಂದಿರದಲ್ಲಿ ಬಾವಸಾರ ಕ್ಷತ್ರೀಯ ಸಮಾಜದವರು ಶ್ರೀಲಕ್ಷ್ಮಿ ಚಾಮುಂಡೇಶ್ವರಿದೇವಿ 13ನೇ ವರ್ಷದ ಆಷಾಢ ಪೂಜಾ ಮಹೋತ್ಸವವನ್ನು ಮಂಗಳವಾರ ಅದ್ದೂರಿಯಾಗಿ ಆಚರಿಸಿದರು.

ವಿಶ್ವಾವಸು ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢಮಾಸದ ದಿನವಾದ ಮಂಗಳವಾರ ಶತಭಿಷ ನಕ್ಷತ್ರದಲ್ಲಿ ಮಹಿಳೆಯರು ಹೇಮಾವತಿ ನದಿಯ ದಂಡೆಯಲ್ಲಿ ಗಂಗೆ ಹಾಗೂ ಕಳಸ ಪೂಜೆ ನೆರವೇರಿಸಿದರು. ಗಂಗಾ ಕಳಸವನ್ನು ಹೊತ್ತ
ಮಹಿಳೆಯರು ಮಂಗಳವಾಧ್ಯದೊಂದಿಗೆ ಪೇಟೆ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಸಾಗಿದರು ಹಾಗೂ ಕುರುಹಿನಶೆಟ್ಟಿ ಕಲ್ಯಾಣ ಮಂದಿರದಲ್ಲಿ ತಾತ್ಕಲಿಕವಾಗಿ ನಿರ್ಮಿಸಿದ್ದ ವಿಶೇಷ ಪೂಜಾ ಮಂಟಪದಲ್ಲಿ ಕಳಸ ಪ್ರಾಣ ಪ್ರತಿಸ್ಠಾಪನೆ ಮಾಡಲಾಯಿತು.

ದೇವರ ನಾಮಗಳನ್ನು ಹಾಡುತ್ತ ಭಜನೆ ಮಾಡಿದರು. ನಂತರ ಮಹಾಮಂಗಳಾರತಿ ನೆರವೇರಿಸಿ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.

ADVERTISEMENT

ಬಾವಸಾರ ಕ್ಷತ್ರೀಯ ಸಂಘದ ಅಧ್ಯಕ್ಷ ರಮೇಶ್ ಕೊಳೆಕರ್, ಕಾರ್ಯದರ್ಶಿ ಗಣೇಶ್ ಸಿಂತ್ರೆ, ಖಜಾಂಚಿ ಸ್ವರೂಪ್ ಕುಮಾರ್, ಬಾವಸಾರ ಕ್ಷತ್ರೀಯ ಮಹಿಳಾ ಸಂಘದ ಅಧ್ಯಕ್ಷೆ ರೇಣುಕಾ ದೇವಿ, ಹೀರಾಬಾಯಿ, ರವಿ ಮಾಳೋತ್ಕರ್, ನರೇಂದ್ರ, ಸತೀಶ್, ನಿಶ್ಚಯ್ ಸಿಂತ್ರೆ, ರವಿಕುಮಾರ್, ಎಸ್.ವಿ.ರಮೇಶ್(ಬಾಳು), ಮೋಹನ್ ರಾವ್, ಉದಯ್, ಸುದರ್ಶನ್, ಗಣೇಶ್, ಸುಪ್ರಿತ್, ಸಂತೋಷ್, ವಿಷ್ಣು, ಗಿರೀಶ್, ಶ್ವೇತ, ಶೃತಿ, ಲತಾ, ಭವ್ಯ, ಲತಾಮಣಿ, ರಮ್ಯಾ,ಜಯಲಕ್ಷ್ಮಿ, ಸವಿತಾ, ಅನಿತಾ, ಮಂಜುಳಾ, ನಿಶಾನ್, ರಕ್ಷಿತ್,ಧನುಶ್ರೀ, ಭುವನ್, ಸ್ನೇಹಿತ್, ಸನ್ವಿತ್, ಆಯುಷ್ ಹಾಗೂ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.