ADVERTISEMENT

ಹಾಸನ | ನ್ಯಾಯಾಧೀಶರ ಮಾಲೀಕತ್ವದ ಮನೆಯಲ್ಲಿ ಕಳ್ಳತನಕ್ಕೆ ಯತ್ನ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2025, 14:10 IST
Last Updated 15 ಏಪ್ರಿಲ್ 2025, 14:10 IST

ಹಾಸನ: ನಗರದ ಎಸ್‌ಬಿಎಂ ಕಾಲೊನಿಯಲ್ಲಿ ಇರುವ, ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್‌ನ ನ್ಯಾಯಾಧೀಶ ಜೈಶಂಕರ್ ಅವರ ಮಾಲೀಕತ್ವದ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಲಾಗಿದೆ.

ಸೋಮವಾರ ರಾತ್ರಿ ಕಬ್ಬಿಣದ ರಾಡ್‌ನಿಂದ ಮನೆಯ ಹಿಂಬಾಗಿಲನ್ನು ಮುರಿಯಲು ಕಳ್ಳರು ಯತ್ನಿಸಿದ್ದಾರೆ. ಚಾಲಕ ಎಚ್ಚರಗೊಂಡಿದ್ದರಿಂದ ಕಳ್ಳರು ಒಂದು ಏರ್ ಗನ್ ಮತ್ತು ಕಬ್ಬಿಣದ ರಾಡ್‌ ಅನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ಜೈಶಂಕರ್ ಅವರು ಫರ್ಟಿಲೈಸರ್ಸ್ ಕಂಪನಿಯ ಉದ್ಯೋಗಿ ಭರತ್ ಎಂಬುವರಿಗೆ ಬಾಡಿಗೆಗೆ ನೀಡಿದ್ದಾರೆ.

ADVERTISEMENT

ಜೈಶಂಕರ್ ಸಿಟಿ ಸಿವಿಲ್ ಕೋರ್ಟ್ 57ರಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನಟ ದರ್ಶನ್ ಆರೋಪಿಯಾಗಿರುವ ರೇಣುಕಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.

ಬಡಾವಣೆ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.