ADVERTISEMENT

‘ಹುಟ್ಟೂರಿನ ಅಭಿಮಾನ ಹೊಂದಿದ್ದ ಭೈರಪ್ಪ’

ಶಿವಣ್ಣ, ಭೈರಪ್ಪ ಅವರಿಗೆ ಅನನ್ಯ ಟ್ರಸ್ಟ್‌ನಿಂದ ಶ್ರದ್ಧಾಂಜಲಿ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 3:06 IST
Last Updated 28 ಸೆಪ್ಟೆಂಬರ್ 2025, 3:06 IST
ಹಾಸನದ ಹೇಮಾವತಿನಗರದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ. ಶಿವಣ್ಣ ಹಾಗೂ ಲೇಖಕ ಎಸ್‌.ಎಲ್‌. ಭೈರಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಹಾಸನದ ಹೇಮಾವತಿನಗರದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ. ಶಿವಣ್ಣ ಹಾಗೂ ಲೇಖಕ ಎಸ್‌.ಎಲ್‌. ಭೈರಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.   

ಹಾಸನ: ಇತ್ತೀಚೆಗೆ ನಿಧನರಾದ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಂ. ಶಿವಣ್ಣ ಹಾಗೂ ಸಾಹಿತಿ ಎಸ್‌‍.ಎಲ್‌. ಭೈರಪ್ಪ ಅವರಿಗೆ ಅನನ್ಯ ಟ್ರಸ್ಟ್‌ ವತಿಯಿಂದ ಇಲ್ಲಿನ ಹೇಮಾವತಿ ನಗರದ ರಚನಾ ನಿಲಯದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞೆ ಡಾ. ರಂಗಲಕ್ಷ್ಮಿ ಮಾತನಾಡಿ, ಸಂತೇಶಿವರ ಗ್ರಾಮದ ಭೈರಪ್ಪನವರು ತಮ್ಮ ಬರಹಗಳ ಮೂಲಕ ಜಿಲ್ಲೆಯ ಕೀರ್ತಿಯನ್ನು ವಿಶ್ವಮಟ್ಟಕ್ಕೆ ಹೆಚ್ಚಿಸಿದ್ದಾರೆ. ಉಪನ್ಯಾಸಕರಾಗಿ ಬದುಕು ಕಟ್ಟಿಕೊಂಡಿದ್ದ ಅವರು ಗುಜರಾತ್‌, ದೆಹಲಿ, ಮೈಸೂರಿನಲ್ಲಿ ಕೆಲಸ ಮಾಡಿದ್ದರೂ ಹುಟ್ಟೂರಿನ ಬಗ್ಗೆ ಅತೀವ ಪ್ರೀತಿ ಹೊಂದಿದ್ದರು ಎಂಬುದನ್ನು ಗೃಹಭಂಗ ಕಾದಂಬರಿ ಹಾಗೂ ಆತಕಥೆ ಭಿತ್ತಿ ಅದನ್ನು ಸಾಕ್ಷೀಕರಿಸುತ್ತದೆ ಎಂದರು.

ಓದುಗರನ್ನು ತಮ್ಮೆಡೆಗೆ ಸೆಳೆಯುವ ಕಲೆ ಅವರಿಗೆ ಕರಗತವಾಗಿತ್ತು. ಆದ್ದರಿಂದಲೇ ಕಾದಂಬರಿಗಳು ದಾಖಲೆ ಮಟ್ಟದಲ್ಲಿ ಮಾರಾಟವಾಗುತ್ತಿದ್ದವು. ಕನ್ನಡದಲ್ಲಿ ಅಂತಹ ಮತ್ತೊಬ್ಬ ಲೇಖಕರನ್ನು ನಾವು ಕಾಣಲು ಸಾಧ್ಯವಿಲ್ಲ ಎಂದರು.

ADVERTISEMENT

ಅನನ್ಯ ಟ್ರಸ್ಟ್‌ ಅಧ್ಯಕ್ಷೆ ಕೆ.ಟಿ. ಜಯಶ್ರೀ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಂ. ಶಿವಣ್ಣ ಹಾಗೂ ಸಾಹಿತಿ ಎಸ್‌‍.ಎಲ್‌. ಭೈರಪ್ಪ ಅವರ ಅಗಲಿಕೆಗೆ ತುಂಬಲಾರದ ನಷ್ಟವುಂಟು ಮಾಡಿದೆ. ಶಿವಣ್ಣ ಅವರು 90ರ ಇಳಿ ವಯಸ್ಸಿನಲ್ಲೂ ಸಕ್ರಿಯರಾಗಿದ್ದರು. ಯುವಕರಿಗೆ ದೇಶ ಪ್ರೇಮದ ಕುರಿತು ಮಾಡುತ್ತಿದ್ದ ಭಾಷಣ ಪ್ರೇರಣಾದಾಯಕವಾಗಿತ್ತು ಎಂದರು.

ಭೈರಪ್ಪ ಅವರ ಸಾಹಿತ್ಯ ಕೃಷಿಗೆ ಹೋಲಿಕೆ ಯಾರಿಂದಲೂ ಸಾಧ್ಯವಿಲ್ಲ. ಪ್ರಸ್ತುತ ದಿನಗಳಲ್ಲಿ ಒಂದೆರಡು ಪುಸ್ತಕ ಬರೆದು ತಾವು ದೊಡ್ಡ ಸಾಹಿತಿ ಎಂದು ಕರೆಸಿಕೊಳ್ಳುವ ಪರಿಸ್ಥಿತಿಯಲ್ಲಿ ಭೈರಪ್ಪನವರು ಎಂದಿಗೂ ಪ್ರಚಾರದ ಹಿಂದೆ ಬಿದ್ದವರಲ್ಲ. ಬಡ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ಸಹಾಯ ಮಾಡಿದ ಭೈರಪ್ಪ ಮಾದರಿಯಾಗಿದ್ದಾರೆ ಎಂದರು.

ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞೆ ಡಾ.ಎ. ಸಾವಿತ್ರಿ, ಲೇಖಕಿ ಸೀತಮ್ಮ ವಿವೇಕ್‌, ಟ್ರಸ್ಟ್‌ ಸದಸ್ಯರಾದ ಜಗದಾಂಬ, ಲಕ್ಷ್ಮೀ, ಶಶಿಕಲಾ, ಕಾಂಚನಮಾಲಾ, ಸುಮನಾ, ಜಯಪ್ರಕಾಶ್‌ ಮತ್ತಿತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.