ADVERTISEMENT

ದೇವಾಂಗ ಸಮುದಾಯದಿಂದ ಭಜನೆ

ಧನುರ್ಮಾಸ: 74 ವರ್ಷಗಳಿಂದ ಆಚರಣೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2021, 4:02 IST
Last Updated 15 ಜನವರಿ 2021, 4:02 IST
ಹೊಳೆನರಸೀಪುರ ಪಟ್ಟಣದಲ್ಲಿ ದೇವಾಂಗ ಸಮುದಾಯದವರು ಧನುರ್ಮಾಸದಲ್ಲಿ ನಡೆಸುವ ಭಜನಾ ಕಾರ್ಯಕ್ರಮ ಗುರುವಾರ ಮುಕ್ತಾಯವಾಯಿತು
ಹೊಳೆನರಸೀಪುರ ಪಟ್ಟಣದಲ್ಲಿ ದೇವಾಂಗ ಸಮುದಾಯದವರು ಧನುರ್ಮಾಸದಲ್ಲಿ ನಡೆಸುವ ಭಜನಾ ಕಾರ್ಯಕ್ರಮ ಗುರುವಾರ ಮುಕ್ತಾಯವಾಯಿತು   

ಹೊಳೆನರಸೀಪುರ: ಧನುರ್ಮಾಸದಲ್ಲಿ ದೇವಾಂಗ ಸಮುದಾಯದವರು ನಡೆಸುವ ಭಜನಾ ಕಾರ್ಯಕ್ರಮ ಸಂಕ್ರಾತಿ ದಿನದಂದು 12 ಗಂಟೆಗಳ ಭಜನೆ ಮಾಡಿ ಮುಕ್ತಾಯ ಮಾಡಲಾಯಿತು.

ಬೆಳಿಗ್ಗೆ 5.30ಕ್ಕೆ ರಾಮ ಮಂದಿರದಿಂದ ದೇವರ ಹಾಡುಗಳನ್ನು ಹೇಳುತ್ತಾ ಸಮುದಾಯದ 40ಕ್ಕೂ ಹೆಚ್ಚು ಜನ ಇಲ್ಲಿನ ಸುಭಾಶ್ ವೃತ್ತದವರೆಗೆ ಬಂದು ನಂತರ ಕನ್ನಿಕಾಪರಮೇಶ್ವರಿ, ಚಾವಡಿ ವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಚೌಡೇಶ್ವರಿ, ಬನಶಂಕರಿ ದೇವಾಲಯದಲ್ಲಿ ಭಜನೆ ಮಾಡಲಾಯಿತು.

ಹೊಳೆದಡದ ಲಕ್ಷ್ಮಣೇಶ್ವರ ದೇವಾಲಯ, ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ, ರಾಘವೇಂದ್ರ ಮಠ, ಮೈಲಾರ ಲಿಂಗೇಶ್ವರ ದೇವಾಲಯ ಸೇರಿದಂತೆ ಎಲ್ಲ ದೇವಸ್ಥಾನಗಳಲ್ಲಿ ಭಜನೆ ನಡೆಸುತ್ತಾರೆ.

ADVERTISEMENT

ದಾರಿಯುದ್ದಕ್ಕೂ ಜನರು ಗರುಡ ಗಂಬಕ್ಕೆ ಪೂಜೆ ಮಾಡಿ ಕಳುಹಿಸುವುದು ವಾಡಿಕೆ.1947ರಲ್ಲಿ ಪ್ರಾರಂಭವಾದ ಭಜನೆ ಕಾರ್ಯಕ್ರಮ ಇಂದಿಗೂ ನಡೆಸಿಕೊಂಡು ಬಂದಿರುವುದು ವಿಶೇಷ.

ಭಜನಾ ಕಮಿಟಿ ಅಧ್ಯಕ್ಷ ಎಚ್.ಎನ್. ವೆಂಕಟರಮಣ್ಣಯ್ಯ, ಎ. ಸೋಮಶೇಖರ್, ಹಾಡುಗಾರರಾದ ಚಂದ್ರ, ಗಣೇಶ್, ನಾರಾಯಣ, ಈಶ್ವರ, ಅರುಣ, ತಬಲಾ ವಾದಕ ಎಚ್.ಆರ್. ರವಿಕುಮಾರ್, ರಾಮಣ್ಣ, ಹಾರ್ಮೋನಿಯಂ ವಾದಕರಾದ ಕಾಳಾಚಾರ್, ವಿದ್ವಾನ್ ಶಿವಣ್ಣ, ಆಟೊ ಯೋಗೇಶ್, ಎಲೆಕ್ಟ್ರಿಕ್ ಕುಮಾರ್, ಪುರಸಭಾ ಸದಸ್ಯ ಎ. ಜಗನ್ನಾಥ್, ಶಿಕ್ಷಕ ವಸಂತ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.