ADVERTISEMENT

ಶಾಲಾ ಮಕ್ಕಳಿಗೆ ಪಾಠೋಪಕರಣ

ಶಂಭುನಾಥ ಸ್ವಾಮೀಜಿ ಅವರ 43ನೇ ವರ್ಧಂತ್ಯುತ್ಸವ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2022, 15:42 IST
Last Updated 10 ಮಾರ್ಚ್ 2022, 15:42 IST
ಹಾಸನದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಂಭುನಾಥ ಸ್ವಾಮೀಜಿ ಅವರು ಸರ್ಕಾರಿ ಶಾಲೆ ಮಕ್ಕಳಿಗೆ ಪಾಠೋಪಕರಣ ವಿತರಿಸಿದರು. ಜಿ.ಎಲ್.ಮುದ್ದೇಗೌಡ, ಎಚ್.ಎಲ್.ಮಲ್ಲೇಶಗೌಡ, ಸಹಜಾನಂದ ಸ್ವಾಮೀಜಿ, ರಾಮೇಗೌಡ ಇದ್ದಾರೆ
ಹಾಸನದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಂಭುನಾಥ ಸ್ವಾಮೀಜಿ ಅವರು ಸರ್ಕಾರಿ ಶಾಲೆ ಮಕ್ಕಳಿಗೆ ಪಾಠೋಪಕರಣ ವಿತರಿಸಿದರು. ಜಿ.ಎಲ್.ಮುದ್ದೇಗೌಡ, ಎಚ್.ಎಲ್.ಮಲ್ಲೇಶಗೌಡ, ಸಹಜಾನಂದ ಸ್ವಾಮೀಜಿ, ರಾಮೇಗೌಡ ಇದ್ದಾರೆ   

ಹಾಸನ: ಆದಿಚುಂಚನಗಿರಿ ಹಾಸನ-ಕೊಡಗು ಶಾಖಾ ಮಠದ ಪೀಠಾಧಿಪತಿ ಶಂಭುನಾಥ ಸ್ವಾಮೀಜಿ ಅವರ 43 ನೇ ಹುಟ್ಟುಹಬ್ಬವನ್ನುಗುರುವಾರ ಭಕ್ತರ ಸಮ್ಮುಖದಲ್ಲಿ ಸರಳವಾಗಿ ಆಚರಿಸಲಾಯಿತು.

ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿಸ್ವಾಮೀಜಿ ಅವರು ಸರ್ಕಾರಿ ಶಾಲಾ ಮಕ್ಕಳಿಗೆ ಪಾಠೋಪಕರಣ ವಿತರಿಸಿದರು. ಇದೇ ವೇಳೆ ಕಾಲಭೈರವೇಶ್ವರ ಭಜನಾ ಮಂಡಳಿ ಅವರ ಭಜನಾ ಸಂಗ್ರಹ ಪುಸ್ತಕವನ್ನು ಬಿಡುಗಡೆ ಮಾಡಿದರು.

ಬಾಗಲಕೋಟೆ ಮಹಾಲಿಂಗರಪುರ ಸಿದ್ಧಾರೂಡ ಬೃಹನ್ಮಠದ ಸಹಜಾನಂದಸ್ವಾಮೀಜಿ ಮಾತನಾಡಿ, ‘ಮನುಷ್ಯ ಜನ್ಮದ ಆಯಸ್ಸು ಶ್ರೇಷ್ಠವಾದುದು.ಕೋಟಿ ಕೋಟಿ ನಾಣ್ಯ ತೂಗಿದರೂ, ಅದು ಸರಿ ಸಮಾನ ಆಗದು ಎಂದು ಹಿರಿಯರು ಹೇಳಿದ್ದಾರೆ. ಒಂದೊಂದು ದಿನವೂ ರತ್ನ ಸದೃಶವಾದುದು. ಇದನ್ನುಜನಹಿತಕ್ಕಾಗಿ ಬಳಸಬೇಕು. ಅದನ್ನು ಶಂಭುನಾಥ ಸ್ವಾಮೀಜಿ ಸಾರ್ಥಕವಾಗಿಬಳಸಿಕೊಂಡು ಬಂದಿದ್ದಾರೆ. ಅವರಿಂದ ಸಮಾನಕ್ಕೆ ಇನ್ನಷ್ಟು ಸೇವೆ ಸಿಗಬೇಕು’ ಎಂದು ನುಡಿದರು.

ADVERTISEMENT

ಇದಕ್ಕೂ ಮುನ್ನ ಮಠದ ಆವರಣದಲ್ಲಿ ಹೋಮ, ಹವನ ನಡೆದವು. ಜೊತೆಗೆಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಪುನಸ್ಕಾರ ಜರುಗಿದವು. ಭಕ್ತರಿಗೆಸಿಹಿ ಹಾಗೂ ಪ್ರಸಾದ ವಿನಿಯೋಗ ಮಾಡಲಾಯಿತು.

ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್. ಮುದ್ದೇಗೌಡ, ಕನ್ನಡ ಸಾಹಿತ್ಯಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಲ್.ಮಲ್ಲೇಶಗೌಡ, ಪತ್ರಕರ್ತಎಸ್.ಆರ್.ಪ್ರಸನ್ನ ಕುಮಾರ್, ಬೊಮ್ಮೆಗೌಡ, ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ, ಸ್ವಾತಂತ್ರ್ಯ ಹೋರಾಟಗಾರ ಶಿವಣ್ಣಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.