ADVERTISEMENT

ಜಾತಿಗಣತಿ: ಅಗತ್ಯ ಬಿದ್ದರೆ ಮರುಪರಿಶೀಲನೆ– ರಾಜಣ್ಣ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 13:41 IST
Last Updated 14 ಏಪ್ರಿಲ್ 2025, 13:41 IST
<div class="paragraphs"><p>ಕೆ.ಎನ್. ರಾಜಣ್ಣ</p></div>

ಕೆ.ಎನ್. ರಾಜಣ್ಣ

   

ಹಾಸನ: ‘ಜಾತಿಗಣತಿ ವರದಿ ಬಗ್ಗೆ ಯಾರಾದರೂ ಆಕ್ಷೇಪ ವ್ಯಕ್ತಪಡಿಸಿದರೆ ಆ ಅಂಶಗಳನ್ನು ಪರಿಶೀಲಿಸಲಾಗುವುದು. ಮರುಪರಿಶೀಲನೆಯ ಅಗತ್ಯವಿದ್ದರೆ, ಆ ಬಗ್ಗೆಯೂ ಚಿಂತನೆ ನಡೆಸಬಹುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸ್ವಾಮೀಜಿಗಳ ಬಳಿ ಇಲ್ಲಿಯವರೆಗೆ ಅಂಕಿ– ಸಂಖ್ಯೆ ಲಭ್ಯವಿತ್ತೇ? ಈಗ ಸ್ವಾಮೀಜಿಗಳು ಮಾತ್ರವಲ್ಲ, ಪ್ರತಿಯೊಬ್ಬರೂ ಈ ವರದಿಯನ್ನು ಪರಾಮರ್ಶಿಸಬಹುದು’ ಎಂದರು.

ADVERTISEMENT

‘ಇನ್ನೂ ಏನನ್ನೂ ತೀರ್ಮಾನಿಸಿಲ್ಲ. ಸಚಿವ ಸಂಪುಟದ ಚರ್ಚೆಯ ನಂತರ ಬರುವ ಅಭಿಪ್ರಾಯಗಳನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಬಿಜೆಪಿಯವರಿಗೆ ಏನು ಗೊತ್ತಿದೆ? ವಿರೋಧ ಪಕ್ಷದವರು ನಾವು ಮಾಡಿದ್ದೆಲ್ಲವೂ ಸರಿ ಎಂದು ಒಪ್ಪಿಕೊಳ್ಳುತ್ತಾರೆ ಎಂದು ನಾವು ನಿರೀಕ್ಷಿಸುವುದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.