ಚನ್ನರಾಯಪಟ್ಟಣ: ಸಂಗೀತ, ಸಾಹಿತ್ಯ, ಕಲೆ ಮತ್ತು ನಾಟಕದ ಮಹತ್ವವನ್ನು ಸಾರುವ ಕಲಾವಿದರು ಸಾಂಸ್ಕೃತಿಕ ರಾಯಭಾರಿಗಳು ಎಂದು ಜಾನಪದ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಹಂಪನಹಳ್ಳಿ ತಿಮ್ಮೇಗೌಡ ಹೇಳಿದರು.
ಪರಿಷತ್ತು ಮತ್ತು ದಿಂಡಗೂರು ಗ್ರಾಮದ ನೆಲದನಿ ಸಾಂಸ್ಕೃತಿಕ ಸಂಘ ಬುಧವಾರ ಪಟ್ಟಣದಲ್ಲಿ ಏರ್ಪಡಿಸಿದ್ದ ಎರಡು ದಿನಗಳ ಜಾನಪದ ಝೇಂಕಾರ ಮತ್ತು ನಾಟಕೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಯುವಕಾಂಗ್ರೆಸ್ ಮುಖಂಡ ಡಿ.ಎಸ್. ಆನಂದ್‍ಗೌಡ ಮಾತನಾಡಿ, ತಾಲ್ಲೂಕಿನಲ್ಲಿರುವ ಕಲಾವಿದರ ಸಭೆ ನಡೆಸಿ ಒಂದು ನಾಟಕ ಆಯ್ಕೆಮಾಡಿ ಒ.ಟಿ.ಟಿ. ವೇದಿಕೆ ಒದಗಿಸಿದರೆ ನಾಟಕ ಪ್ರವರ್ಧಮಾನಕ್ಕೆ ಬರಲು ಅವಕಾಶವಾಗುತ್ತದೆ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡ ಎಂ.ಎ. ಗೋಪಾಲಸ್ವಾಮಿ ಮಾತನಾಡಿ, ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಹೆಚ್ಚು ಕಲಾವಿದರಿದ್ದಾರೆ. ಪ್ರತಿವಾರ ಪೌರಾಣಿಕ ನಾಟಕ ಪ್ರದರ್ಶನವಾಗುತ್ತದೆ ಎಂದು ತಿಳಿಸಿದರು.
ತಾಲ್ಲೂಕು ಜಾನಪದ ಪರಿಷತ್ತು ಅಧ್ಯಕ್ಷ ಸಂತೋಷ್ ದಿಂಡಗೂರುಮಾತನಾಡಿದರು. ಸುಧಾಆಡುಕಳ ಅಭಿನಯಿಸಿದ ಮಹಿಳಾ ಏಕವ್ಯಕ್ತಿ ನಾಟಕ ದೀಪಧಾರಿಣಿ ನಾಟಕ ಪ್ರದರ್ಶಿಸಲಾಯಿತು. ಇದಕ್ಕೂ ಮುನ್ನಾ ಮಂಜುಮಟ್ಟನವಿಲೆ ಮತ್ತು ಉಮೇಶ್ ತೆಂಕನಹಳ್ಳಿ ತಂಡದ ಕಲಾವಿದರು ಜಾನಪದಗೀತಗಾಯನ ನಡೆಸಿಕೊಟ್ಟರು.
ಕಾಂಗ್ರೆಸ್ ಮುಖಂಡರಾದ ಎ.ಸಿ. ಆನಂದ್ ಕುಮಾರ್, ಎಚ್.ಎನ್. ಲವಣ್ಣ, ದಿಂಡಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಸಂಘದ ನಿರ್ದೇಶಕ ಶಿವಲಿಂಗೇಗೌಡ, ನಿವೃತ್ತ ಸಹಾಯಕ ಪ್ರಾಧ್ಯಾಪಕ ಎಚ್. ಸಿದ್ದೇಗೌಡ, ರಾಜ್ಯಯುವಕಾಂಗ್ರೆಸ್ ಕಾರ್ಯದರ್ಶಿ ಶಶಾಂಕ್, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಎಂ.ಕೆ. ಮಂಜೇಗೌಡ, ತಾಲ್ಲೂಕು ರಕ್ಷಣಾ ವೇದಿಕೆಯ ಮಹಿಳಾ ಘಟಕದ ಅದ್ಯಕ್ಷೆ ದಾಕ್ಷಾಯಿಣಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.