ADVERTISEMENT

ಚನ್ನಕೇಶವಸ್ವಾಮಿ ನಾಡ ರಥೋತ್ಸವ  

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2021, 4:49 IST
Last Updated 25 ಏಪ್ರಿಲ್ 2021, 4:49 IST
ಬೇಲೂರಿನ ಶ್ರೀಚನ್ನಕೇಶವಸ್ವಾಮಿ ನಾಡ ರಥೋತ್ಸವವನ್ನು ದೇಗುಲದ ಒಳ ಆವರಣದಲ್ಲೇ ಸರಳವಾಗಿ ಆಚರಿಸಲಾಯಿತು
ಬೇಲೂರಿನ ಶ್ರೀಚನ್ನಕೇಶವಸ್ವಾಮಿ ನಾಡ ರಥೋತ್ಸವವನ್ನು ದೇಗುಲದ ಒಳ ಆವರಣದಲ್ಲೇ ಸರಳವಾಗಿ ಆಚರಿಸಲಾಯಿತು   

ಬೇಲೂರು: ಶ್ರೀಚನ್ನಕೇಶವಸ್ವಾಮಿಯ ನಾಡ ರಥೋತ್ಸವವನ್ನು ಶನಿವಾರ ಸರಳವಾಗಿ ನಡೆಸಲಾಯಿತು.

ದೇಗುಲದ ಒಳ ಆವರಣದಲ್ಲಿ ಶುಕ್ರವಾರ ಚಿಕ್ಕರಥದಲ್ಲಿ ದಿವ್ಯರಥೋತ್ಸವ ಆಚರಿಸಿ ರಥವನ್ನು ದೇಗುಲದ ಬಲಭಾಗದಲ್ಲಿ ನಿಲ್ಲಿಸಲಾಗಿತ್ತು. ಶನಿವಾರ ಬೆಳಿಗ್ಗೆ ಸಂಪ್ರದಾಯದಂತೆ ವಿವಿಧ ಪೂಜೆಗಳನ್ನು ಸಲ್ಲಿಸಿ ರಥವನ್ನು ದೇಗುಲದ ಮೂರು ದಿಕ್ಕುಗಳಲ್ಲಿ ಎಳೆಯಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೆ.ಎಸ್.ಲಿಂಗೇಶ್, ‘ಪ್ರತಿವರ್ಷ ಶ್ರೀ ಚನ್ನಕೇಶವಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ನೆರವೇರುತ್ತಿತ್ತು. ಆದರೆ, ಕೋವಿಡ್ ಕಾರಣದಿಂದ ಕಳೆದ ವರ್ಷ ರಥೋತ್ಸವ ರದ್ದಾಗಿತ್ತು. ಈ ವರ್ಷ ಚಿಕ್ಕ ರಥದಲ್ಲಿ ಸರಳವಾಗಿ ಆಚರಿಸಿದ್ದೇವೆ. ಮುಂದಿನ ವರ್ಷ ರಥೋತ್ಸವವನ್ನು ಅದ್ಧೂರಿಯಾಗಿ ಆಚರಿಸುವ ಸದಾವಕಾಶ ಬರುತ್ತದೆ’ ಎಂದರು.

ADVERTISEMENT

ಈ ಸಂದರ್ಭದಲ್ಲಿ ನಾಡ ಪಟೇಲರು, ಅಡ್ಡೆಗಾರರು, ಅರ್ಚಕರು, ದೇಗುಲದ ಇಒ ಆರ್.ವಿದ್ಯುಲತಾ, ತಾ.ಪಂ ಇ.ಒ ರವಿಕುಮಾರ್, ಪೊಲೀಸ್ ವೃತ್ತ ನಿರೀಕ್ಷಕ ಶ್ರೀಕಾಂತ್, ಡಾ.ನರಸೇಗೌಡ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.