ADVERTISEMENT

ಅರಸೀಕೆರೆ | ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ: ವತ್ಸಲಾ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 3:12 IST
Last Updated 22 ನವೆಂಬರ್ 2025, 3:12 IST
ಅರಸೀಕೆರೆ ತಾಲ್ಲೂಕಿನ ನಾಗವೇದಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ವತ್ಸಲಾ ಶೇಖರಪ್ಪ ಉದ್ಘಾಟಿಸಿದರು.
ಅರಸೀಕೆರೆ ತಾಲ್ಲೂಕಿನ ನಾಗವೇದಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ವತ್ಸಲಾ ಶೇಖರಪ್ಪ ಉದ್ಘಾಟಿಸಿದರು.   

ಅರಸೀಕೆರೆ: ತಾಲ್ಲೂಕಿನ ನಾಗವೇದಿ ಗ್ರಾಮದಲ್ಲಿ ಜೆ.ಸಿ.ಪುರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ, ನಾಗವೇದಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಪಾಲಕರು ಮತ್ತು ಪೋಷಕರು ಮತ್ತು ಶಿಕ್ಷಕರ ಮಹಾಸಭೆ ಆಯೋಜಿಸಲಾಗಿತ್ತು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ವತ್ಸಲಾ ಶೇಖರಪ್ಪ ಮಾತನಾಡಿ, ಮಕ್ಕಳು ಗುಣಾತ್ಮಕ ಶಿಕ್ಷಣ ಪಡೆಯಬೇಕಾದರೆ ಇಂತಹ ಸಭೆ ಸಮಾರಂಭ, ಆಟೋಟಗಳಲ್ಲಿ ಭಾಗವಹಿಸಬೇಕು. ಅವರ ಚಲನವಲನಗಳನ್ನ ಗಮನಿಸಿ ಅವರಲ್ಲಿ ಯಾವ ಕಲೆ ಅಡಗಿದೆ ಎ೦ದು ಗುರುತಿಸಿ ಅವರ ಮುಂದಿನ ವಿದ್ಯಾಭ್ಯಾಸ ಮತ್ತು ಕಲೆಗೆ ಪ್ರೋತ್ಸಾಹ ನೀಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಿದ್ದೇಶ ನಾಗವೇದಿ ಮಾತನಾಡಿ, ಇತ್ತೀಚಿನ ಮಕ್ಕಳಿಗೆ ಸಂಸ್ಕಾರವಂತ ಶಿಕ್ಷಣ ಪಡೆಯಲು ಇಂತಹ ಕಾರ್ಯಕ್ರಮಗಳನ್ನು ಪ್ರತಿ ತಿಂಗಳು ನಡೆಸಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ಅದರಲ್ಲೂ ಗ್ರಾಮೀಣ ಪ್ರದೇಶದ ಶಿಕ್ಷಣಕ್ಕೆ ಇಂತಹ ಕಾರ್ಯಕ್ರಮಗಳು ಉಪಯುಕ್ತ ಎಂದರು.

ADVERTISEMENT

ವೀರಶೈವ ಸಮಾಜ ಮುಖಂಡ ಶಂಕರಲಿಂಗಪ್ಪ ಮಾತನಾಡಿ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಶಾಲೆಯಲ್ಲಿ ಅಕ್ಷರ ಜ್ಞಾನ ಕೊಟ್ಟರೆ ವಿದ್ಯಾರ್ಥಿ ಉತ್ತಮ ಪ್ರಜೆಯಾಗಿ ಸಮಾಜಕ್ಕೆ ಉತ್ತಮ ಸಂದೇಶ ಕೊಡುತ್ತಾರೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್, ಜೆ.ಸಿ. ಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನ, ನಿವೃತ್ತ ಎಂಜಿನಿಯರ್‌ ಎನ್‌.ಎಂ. ಶೇಖರಪ್ಪ, ನಾಗವೇದಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಎನ್‌.ಕೆ. ಸಿದ್ದೇಶ್‌, ಕಣಕಟ್ಟೆ ಹೋಬಳಿಯ ಶಿಕ್ಷಣ ಸಂಯೋಜನೆ ಅಧಿಕಾರಿ ಸತೀಶ, ಮುಖ್ಯ ಶಿಕ್ಷಕಿ ವೈ.ಟಿ. ನಾಗಮ್ಮ, ನಾಗವೇದಿ ಪ್ರೌಢಶಾಲೆ ಶಿಕ್ಷಕ ಯೋಗೀಶ್‌, ಜೆ.ಸಿ.‌ಪುರ ಗ್ರಾಮ ಪಂಚಾಯಿತಿ ಸದಸ್ಯ ರವಿಕುಮಾರ್ ಎನ್‌.ಎಸ್‌., ಗ್ರಾ.ಪಂ. ಮಾಜಿ ಅಧ್ಯಕ್ಷ ಎನ್‌.ಎಸ್‌. ವಿಜಯಕುಮಾರ, ಲಿಂಗರಾಜ್ ಎನ್‌.ಎಸ್‌., ಶಂಕರಲಿಂಗಪ್ಪ ಎನ್‌.ಬಿ. ಸಿದ್ದರಾಮೇಗೌಡ, ಶಂಕರಲಿಂಗಪ್ಪ ಉಪಸ್ಥಿತಿರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.