ADVERTISEMENT

ಸಕಲೇಶಪುರದಲ್ಲಿ ನಾಳೆ ಕಾಫಿ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2024, 15:19 IST
Last Updated 19 ಸೆಪ್ಟೆಂಬರ್ 2024, 15:19 IST

ಸಕಲೇಶಪುರ: ‘ಬದಲಾದ ಹವಾಮಾನದಲ್ಲಿ ಕಾಫಿ ಕೃಷಿಯಲ್ಲಿ ನೀರಾವರಿ ಮತ್ತು ಪೋಷಕಾಂಶಗಳ ನಿರ್ವಹಣೆ ಹಾಗೂ ಯಾಂತ್ರೀಕರಣ ಅಳವಡಿಕೆ ಕುರಿತಾದ ವಿಚಾರ ಸಂಕಿರಣ ಸೆ. 21ರಂದು ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ’ ಹಾಸನ ಜಿಲ್ಲಾ ಪ್ಲಾಂಟರ್ಸ್‌ ಸಂಘದ ಅಧ್ಯಕ್ಷ ಎಚ್‌ಡಿಪಿಎ ಅಧ್ಯಕ್ಷ ಪರಮೇಶ್ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಸುಮಾರು 150 ಎಕರೆ ಕಾಫಿ ತೋಟವನ್ನು ಯಂತ್ರಗಳನ್ನು ಇಟ್ಟುಕೊಂಡು ಕೇವಲ 5 ಮಂದಿ ಕಾರ್ಮಿಕರಿಂದ ನಿರ್ವಹಣೆ ಮಾಡುತ್ತಿರುವ ತಮಿಳುನಾಡಿನ ಪ್ರಗತಿಪರ ಬೆಳೆಗಾರ ರೇಗಿಸ್ ಗುಸ್ತವ್, ಕಾಫಿ ಮಂಡಳಿ ಸಿಇಒ ಡಾ. ಕೆ.ಜಿ. ಜಗದೀಶ್, ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ ಬಾಳೆಹೊನ್ನೂರಿನ ಸಸ್ಯಶಾಸ್ತ್ರ ಸಂಶೋಧನಾ ವಿಭಾಗದ ವಿಭಾಗೀಯ ಮುಖ್ಯಸ್ಥ ಡಾ. ಚೀನಾ ದೇವಸಿಯಾ, ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ, ಬಾಳೆಹೊನ್ನೂರಿನ ಕೃಷಿ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಪಿ.ಶಿವಪ್ರಸಾದ್ ಮಾಹಿತಿ ಹಂಚಿಕೊಳ್ಳುವರು’ ಎಂದರು

ಅ.1ಕ್ಕೆ ಮೈಸೂರಿನಲ್ಲಿ ಕಾಫಿ ಸಮ್ಮೇಳನ: ಎಚ್‌ಡಿಪಿಎ ಕಾರ್ಯದರ್ಶಿ ಲೋಹಿತ್ ಕೌಡಳ್ಳಿ ಮಾತನಾಡಿ, ಭಾರತದ ಕಾಫಿಯ ವೈಶಿಷ್ಟ್ಯತೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯಗೊಳಿಸುವ ಉದ್ದೇಶದಿಂದ ಅ. 1 ರಂದು ಮೈಸೂರಿನ ಅರಮನೆಯ ಆವರಣದ ಉತ್ತರ ಬಲರಾಮ ದ್ವಾರದಲ್ಲಿ ಕಾಫಿ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ’ ಎಂದರು.

ADVERTISEMENT

ಸುದ್ದಿಗೋಷ್ಠಿಯಲ್ಲಿ ಕೃಷ್ಣಮೂರ್ತಿ ಖಂಡಿಗೆ, ಮೋಹನ್, ಸಚಿನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.