ಆರಸೀಕೆರೆ: ತಾಲ್ಲೂಕಿನ ಮಾಡಾಳು ಗ್ರಾಮದ ಹಾರನಹಳ್ಳಿ ಕೋಡಿಮಠದ ಲಿಂಗೈಕ್ಯ ಪರಮಪೂಜ್ಯ ಶಿವಲಿಂಗ ಸ್ವಾಮಿಗಳ 138ನೇ ಪುಣ್ಯಸ್ಮರಣೆ ಮೇ 12ರಿಂದ 17ರವರೆಗೆ ಜರುಗಲಿದೆ ಎಂದು ಸ್ವರ್ಣ ಗೌರಮ್ಮ ದೇವಿ ಸೇವಾ ಸಮಿತಿ ಅಧ್ಯಕ್ಷ ಎಂ.ಎಸ್. ನಟರಾಜ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇಶ ವಿದೇಶಗಳಲ್ಲಿ ಕೋಡಿಮಠದ ಸಂಸ್ಕೃತಿ ಹಾಗೂ ವಿಚಾರಧಾರೆಗಳು ಹೆಸರಾಗಿದ್ದು ಲಿಂಗೈಕ್ಯ ಶಿವಲಿಂಗ ಸ್ವಾಮೀಜಿ ಪುಣ್ಯಸ್ಮರಣೆಯನ್ನು ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಿ ದೇವಾಲಯದ ಆವರಣದಲ್ಲಿ 6 ದಿನ ವಿಶೇಷವಾಗಿ ನಡೆಯಲಿದ್ದು ಸದ್ಭಕ್ತರು ಭಾಗವಹಿಸಬೇಕು’ ಎಂದರು.
ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ನಿರ್ದೇಶನದಂತೆ ಎಲ್ಲ ಕೈಂಕರ್ಯಗಳು ಜರುಗಲಿದ್ದು, ಸಾನ್ನಿಧ್ಯ ವಹಿಸಲಿದ್ದಾರೆ ಹಾಗೂ ಉತ್ತರಾಧಿಕಾರಿ ಚೇತನ್ ಮರಿದೇವರು ಉಪಸ್ಥಿತರಿರುತ್ತಾರೆ. ಪ್ರತಿದಿನ ಸಂಜೆ 7 ಗಂಟೆಗೆ ಶಿವಲಿಂಗ ಸ್ವಾಮೀಜಿ ಪುರಾಣ ಪ್ರವಚನಗಳು ಕಲಾ ಸಾರ್ವಭೌಮ ಕಲ್ಲಿನಾಥ ಶಾಸ್ತ್ರಿಗಳು ನಡೆಸಲಿದ್ದಾರೆ.
‘ಪ್ರವಚನಕ್ಕೂ ಮುನ್ನ ರಾಂಪುರ ನಿರ್ವಾಣ ಸಿದ್ಧೇಶ್ವರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ಆಗಮಿಸುವ ಭಕ್ತಾದಿಗಳಿಗೆ ದಾಸೋಹ ವ್ಯವಸ್ಥೆ ಇರುತ್ತದೆ’ ಎಂದು ಅವರು ತಿಳಿಸಿದರು.
ಗೌರವಾಧ್ಯಕ್ಷ ಎಸ್.ಮಲ್ಲಿಕಾರ್ಜುನಪ್ಪ, ಮುಖಂಡರಾದ ಕೊಡ್ಲಿ ಬಸವರಾಜ್, ಎಂ.ಸಿ. ನಟರಾಜ್, ಶಿವಲಿಂಗಪ್ಪ, ಚಂದ್ರಶೇಖರ್ ಎಂ.ಎಸ್., ಮರಳೇಗೌಡ ಎಂ.ಜಿ., ಶಿವಣ್ಣ, ಅಶೋಕ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.