ADVERTISEMENT

ಹೆತ್ತೂರು | ಮುಂದುವರಿದ ಮಳೆ: ಮನೆ ಕುಸಿತ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 14:04 IST
Last Updated 3 ಜುಲೈ 2025, 14:04 IST
<div class="paragraphs"><p>ಹೆತ್ತೂರು ಹೋಬಳಿ ಹಂಡಳ್ಳಿ ಕೂಡಿಗೆಯಲ್ಲಿ ಮಳೆಯಿಂದ ಮನೆ ಕುಸಿದಿದೆ</p></div>

ಹೆತ್ತೂರು ಹೋಬಳಿ ಹಂಡಳ್ಳಿ ಕೂಡಿಗೆಯಲ್ಲಿ ಮಳೆಯಿಂದ ಮನೆ ಕುಸಿದಿದೆ

   

ಹೆತ್ತೂರು: ಹೋಬಳಿಯ ವನಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂಡಳ್ಳಿ ಕೂಡಿಗೆಯಲ್ಲಿ ಭಾರಿ ಮಳೆಗೆ ಮನೆ ಕುಸಿದು ಬಿದ್ದಿದೆ. ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.

ಒಂದು ವಾರದಿಂದ ಸತತವಾಗಿ ಈ ಭಾಗದಲ್ಲಿ ಮಳೆ ಮುಂದುವರಿದಿದ್ದು, ಹಂಡಳ್ಳಿ ಗ್ರಾಮದ ಕಮಲಮ್ಮ ಎಂಬುವರ ಮನೆ ಶೇ 70ರಷ್ಟು ಕುಸಿದು ಬಿದ್ದಿದೆ. ಮನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳು ಹಾಗೂ ಶಾಲೆಗೆ ಹೋಗುವ ಮಕ್ಕಳಿದ್ದು , ಸದ್ಯ ಕುಟುಂಬ ಮನೆ ಇಲ್ಲದೆ ಕಂಗಾಲಾಗಿದೆ.

ADVERTISEMENT

ಸ್ಥಳಕ್ಕೆ ಗ್ರಾಮ ಪಂಚಾಯಿತಿ ಲೆಕ್ಕಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದ್ದು, ಸೂಕ್ತ ಪರಿಹಾರದ ಭರವಸೆ ನೀಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.