ನುಗ್ಗೇಹಳ್ಳಿ (ಹಾಸನ ಜಿಲ್ಲೆ): ಸಮೀಪದ ಅಣತಿ ಗ್ರಾಮದಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ವಳಗೇರಹಳ್ಳಿಯ ನೂತನ್ (15) ಹಾಗೂ ಬೀರೇಶ್ (14) ಮೃತರು. ಬೇಸಿಗೆ ರಜೆ ಕಳೆಯಲು ಸಹೋದರರಾದ ಯಶ್ವಂತ್, ನೂತನ್ ಹಾಗೂ ಚಿಕ್ಕಪ್ಪನ ಮಗ ಬೀರೇಶ್, ಪಕ್ಕದ ಅಣತಿ ಗ್ರಾಮದ ಕೆರೆಗೆ ಈಜಲು ತೆರಳಿದ್ದರು. ಆಳವಾದ ಕೆರೆಗೆ ಇಳಿಯುತ್ತಿದ್ದಂತೆ ನೂತನ್ ಹಾಗೂ ಬೀರೇಶ್ ಮುಳುಗಿದ್ದಾರೆ. ಯಶ್ವಂತ್‌ಗೆ ಈಜು ಬಾರದ ಕಾರಣ, ಕಣ್ಣೆದೆರು ಅವರು ಮುಳುಗುತ್ತಿದ್ದರೂ ರಕ್ಷಿಸಲು ಸಾಧ್ಯವಾಗಿಲ್ಲ.
ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಮೃತದೇಹಗಳನ್ನು ಹೊರತೆಗೆದರು. ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ನುಗ್ಗೇಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.