ADVERTISEMENT

ಒಕ್ಕಲೆಬ್ಬಿಸಲು ಯತ್ನ: ರೈತರಿಂದ ಶಾಸಕರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 13:49 IST
Last Updated 10 ಜೂನ್ 2025, 13:49 IST
ದೊಡ್ಡಿಹಳ್ಳಿ ಗ್ರಾಮದ ರೈತರು ಬೇಲೂರಿನಲ್ಲಿ ಶಾಸಕ ಎಚ್‌.ಕೆ. ಸುರೇಶ್‌ ಅವರಿಗೆ ಮನವಿ ಸಲ್ಲಿಸಿದರು
ದೊಡ್ಡಿಹಳ್ಳಿ ಗ್ರಾಮದ ರೈತರು ಬೇಲೂರಿನಲ್ಲಿ ಶಾಸಕ ಎಚ್‌.ಕೆ. ಸುರೇಶ್‌ ಅವರಿಗೆ ಮನವಿ ಸಲ್ಲಿಸಿದರು   

ಬೇಲೂರು: ಪೂರ್ವಿಕರ ಕಾಲದಿಂದಲೂ ಸರ್ಕಾರಿ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದ ರೈತರನ್ನು ಒಕ್ಕಲೆಬ್ಬಿಸುವ ಕೆಲಸಕ್ಕೆ ಕಂದಾಯ ಇಲಾಖೆ ಮುಂದಾಗಿದೆ. ಜಮೀನು ಉಳಿವಿಗಾಗಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಂದು ದೊಡ್ಡಿಹಳ್ಳಿ ಗ್ರಾಮಸ್ಥರು ಎಚ್ಚರಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಮುಂಭಾಗದಲ್ಲಿ ಶಾಸಕ ಎಚ್‌.ಕೆ. ಸುರೇಶ್ ಅವರಿಗೆ ಮನವಿ ಸಲ್ಲಿಸಿದ ಗ್ರಾಮದ ಧರ್ಮೇಗೌಡ ಮಾತನಾಡಿ, ದೊಡ್ಡಿಹಳ್ಳಿ ಗ್ರಾಮದ ಸರ್ವೆ ನಂಬರ್‌ 58/59 ರಲ್ಲಿ 60 ವರ್ಷಗಳಿಂದ ಸ್ವಾತಂತ್ರ್ಯ ಹೋರಾಟಗಾರರಾದ ನಂಜಪ್ಪ ಹಾಗೂ ನಂಜುಂಡಯ್ಯ ಎಂಬುವವರಿಗೆ ಸರ್ಕಾರ ಜಮೀನು ನೀಡಿತ್ತು. ಅಂದಿನಿಂದ ಇಂದಿನವರೆಗೂ ಇದೇ ಗ್ರಾಮದಲ್ಲಿ 20 ಕುಟುಂಬಗಳು ವಾಸವಿದ್ದು, ಇದೇ ಜಮೀನಿನ ಮೂಲಕ ತಮ್ಮ ಜೀವನ ನಡೆಸಿಕೊಂಡು ಬರುತ್ತಿವೆ ಎಂದು ತಿಳಿಸಿದರು.

‘ಕಲ್ಲು ಮಿಶ್ರಿತ ಭೂಮಿಯಲ್ಲಿ ಉಳುಮೆ ಮಾಡಿಕೊಂಡು ಬರುತ್ತಿದ್ದೇವೆ. ರೈತರಿಗೆ ತೊಂದರೆ ಕೊಡದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ನ್ಯಾಯಾಲದ ಆದೇಶ ಗಾಳಿಗೆ ತೂರಿ ಕಂದಾಯ ಇಲಾಖೆಯವರು ಏಕಾಏಕಿ ನಮ್ಮನ್ನು ಒಕ್ಕಲೆಬ್ಬಿಸಲು ಮುಂದಾಗಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಶಾಸಕ ಎಚ್‌.ಕೆ. ಸುರೇಶ್ ಮಾತನಾಡಿ, ‘ನನ್ನ ಕ್ಷೇತ್ರದಲ್ಲಿ ಬಡ ರೈತರನ್ನು ಒಕ್ಕಲೆಬ್ಬಿಸುವುದಕ್ಕೆ ಬಿಡುವುದಿಲ್ಲ. ಕಂದಾಯ ಇಲಾಖೆಯಿಂದ ಸೂಕ್ತ ಮಾಹಿತಿ ಹಾಗೂ ಸಂಪೂರ್ಣ ದಾಖಲಾತಿ ಕೇಳಿದ್ದೇನೆ. ಮಾಹಿತಿ ಬಂದ ನಂತರ ಸೂಕ್ತ ತನಿಖೆ ಮಾಡಿಸಿ, ರೈತರಿಗೆ ನ್ಯಾಯ ದೊರಕಿಸುವ ಕೆಲಸ ಮಾಡುತ್ತೇನೆ. ತಹಶೀಲ್ದಾರರಿಗೂ ಮಾಹಿತಿ ನೀಡಲು ಹೇಳಿದ್ದೇನೆ’ ಎಂದರು.

ದೊಡ್ಡಿಹಳ್ಳಿ ಗ್ರಾಮದ ಶಿವಕುಮಾರ್, ನಂಜುಂಡಯ್ಯ, ಉಮಾಶಂಕರ್, ಶಶಿಧರ್, ಸಂಜೀವ್, ಕುಮಾರ ಸ್ವಾಮಿ, ನಿಂಗಮ್ಮ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.