ADVERTISEMENT

ಸ್ವಾತಂತ್ರ್ಯ ಯೋಧ ರಾಮಣ್ಣ ನಿಧನ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 15:45 IST
Last Updated 25 ನವೆಂಬರ್ 2021, 15:45 IST
ರಾಮಣ್ಣ
ರಾಮಣ್ಣ   

ಹಾಸನ: ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರ ನಗರದ ಅರಳಿಕಟ್ಟೆ ನಿವಾಸಿಎನ್.ಆರ್ ರಾಮಣ್ಣ (94) ಗುರುವಾರ ನಿಧನರಾದರು.

ಪತ್ನಿ ಹಾಗೂ ಮೂವರು ಪುತ್ರಿಯರು ಇದ್ದಾರೆ. ಸಂಜೆ ಅಂತ್ಯಕ್ರಿಯೆ ನೆರವೇರಿತು. ರಾಮಣ್ಣ ಅವರು 1946-47ರಲ್ಲಿ ಹಾರನಹಳ್ಳಿ ರಾಮಸ್ವಾಮಿ ಅವರ ಜೊತೆಗೂಡಿ ಸ್ವಾತಂತ್ರ‍್ಯಹೋರಾಟದಲ್ಲಿ ಪಾಲ್ಗೊಂಡಿದ್ದರು. ಹಾಸನ ಕೋ ಆಪರೇಟಿವ್‌ ಸೊಸೈಟಿಯಲ್ಲಿ ಗುಮಾಸ್ತರಾಗಿ ಕೆಲಸಕ್ಕೆ ಸೇರಿ 40 ವರ್ಷ ಸೇವೆ ಸಲ್ಲಿಸಿದ್ದರು. ಹಾಗಾಗಿ ಅವರು ಸೊಸೈಟಿ ರಾಮಣ್ಣ ಎಂದೇ ಖ್ಯಾತರಾಗಿದ್ದರು. ಹಲವಾರು ಜನರಿಗೆ ವೇದ ಪಾಠ ಮಾಡಿದ್ದರು.

ಎಚ್.ಸಿ. ಪ್ರಕಾಶ

ADVERTISEMENT

ಹೊಳೆನರಸೀಪುರ: ಪಟ್ಟಣದ ಕೋಟೆ ದಾಸಗೌಡರ ಬೀದಿಯ ನಿವಾಸಿ ಹಾಗೂ ವೆಂಕಟೇಶ್ವರ ವಿದ್ಯಾ ಸಂಸ್ಥೆಯ ನೌಕರ ಎಚ್.ಸಿ. ಪ್ರಕಾಶ (49) ಕಿಡ್ನಿ ವೈಫಲ್ಯದಿಂದ ಬುಧವಾರ ರಾತ್ರಿ ನಿಧನರಾದರು.

ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಗುರುವಾರ ಅಂತ್ಯಕ್ರಿಯೆ ನಡೆಯಿತು.

ಎಚ್‌.ಎಸ್‌.ಪುಟ್ಟಸ್ವಾಮಿ

ಹಾಸನ: ಅನಾರೋಗ್ಯದಿಂದ ಬಳಲುತ್ತಿದ್ದ ನಗರದ ಉತ್ತರ ಬಡಾವಣೆಯ ನಿವಾಸಿ ಎಚ್.ಎಸ್.ಪುಟ್ಟಸ್ವಾಮಿ ಅವರು ಗುರುವಾರ ನಿಧನರಾದರು.

ಅವರಿಗೆ ಪತ್ನಿ, ಮೂವರು ಪುತ್ರಿಯರು, ಇಬ್ಬರು ಪುತ್ರರು ಇದ್ದಾರೆ. ಅಂತ್ಯಕ್ರಿಯೆ ಶುಕ್ರವಾರ 12 ಗಂಟೆ ನಂತರ ನಗರದ ಬಿಟ್ಟಗೋಡನಹಳ್ಳಿ ರುದ್ರಭೂಮಿಯಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.