ಹಾಸನ: ನಗರದ ಹೊರವಲಯದ ಉದ್ದೂರು ಗ್ರಾಮದ ಬಳಿ ಸಾರ್ವಜನಿಕ ಸ್ಥಳದಲ್ಲಿ ಜೂಜಾಡುತ್ತಿದ್ದ 11 ಜನರನ್ನು ಬಂಧಿಸಿರುವ ಡಿಸಿಆರ್‌ಬಿ ಪೊಲೀಸರು, ₹ 20,01,580 ನಗದು ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದ ಡಿಸಿಆರ್‌ಬಿ ಸಬ್ ಇನ್‌ಸ್ಪೆಕ್ಟರ್ ವಿನಯ್ ಅವರು, ಆರೋಪಿಗಳಾದ ತಮ್ಮಯ್ಯ, ಜಿತೇಂದ್ರ, ಜಲೇಂದ್ರ, ವಿಜಯಕುಮಾರ್, ಶಾಂತಪ್ಪ, ಶಶಿಕುಮಾರ್, ಅಶೋಕ, ಸರ್ವರ್ ಖಾನ್, ಸುಮನ್, ಕುಮಾರ್, ಕಿರಣ್ ಎಂಬುವವರನ್ನು ಬಂಧಿಸಿದ್ದಾರೆ. ನಗರದ ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.