ಹಿರೀಸಾವೆ: ಗೌರಿ ಗಣೇಶ ಹಬ್ಬದ ಮಾರುಕಟ್ಟೆಯಲ್ಲಿ ಸೋಮವಾರ ಸೌತೆಕಾಯಿ, ಪುಟ್ಟಬಾಳೆಹಣ್ಣು ಹೂವಿನ ಬೆಲೆ ಹೆಚ್ಚಾಗಿತ್ತು.
ಹಣ್ಣು, ಬಳೆ, ಹೂವು, ತರಕಾರಿಗಳನ್ನು ಕೊಳ್ಳುವವರ ಸಂಖ್ಯೆ ಮಾರುಕಟ್ಟೆಯಲ್ಲಿ ಬಹಳ ವಿರಳವಾಗಿತ್ತು. ಇಲ್ಲಿನ ಶ್ರೀಕಂಠಯ್ಯ ವೃತ್ತದಲ್ಲಿನ ಹೂವಿನ ಮಾರುಕಟ್ಟೆಯಲ್ಲಿ, ಹಳದಿ ಸೇವಂತಿಗೆ ಮಾರಿಗೆ₹ 100 ರಿಂದ ₹150 ಇತ್ತು. ಗೌರಿ ಹಬ್ಬದಲ್ಲಿ ಅಕ್ಕ–ತಂಗಿಯರಿಗೆ ಬಾಗಿನದ ಜೊತೆಯಲ್ಲಿ ಕೊಡುವ ಸೌತೆಕಾಯಿಗೆ ಎರಡು ದಿನದ ಹಿಂದೆ 3ಕ್ಕೆ ₹10 ಇತ್ತು. ಇಂದು ಒಂದಕ್ಕೆ ₹ 10 ಆಗಿತ್ತು. ಈರುಳಿ 4 ಕೆಜಿಗೆ ₹100, ಹಸಿ ಮೆಣಸಿನಕಾಯಿ ಮತ್ತು ಬೀನ್ಸ್ ₹80, ಇತರೆ ತರಕಾರಿಗಳು ₹ 30 ರಿಂದ 60 ಆಗಿತ್ತು. ಸೇಬು ಹಣ್ಣು ಕೆಜಿಗೆ ₹ 120 ರಿಂದ ₹150 ಇದ್ದರೆ, ದಾಳಿಂಬೆ ₹180, ಉಳಿದ ಎಲ್ಲ ಹಣ್ಣುಗಳು ₹100, ಪುಟ್ಟ ಬಾಳೆಹಣ್ಣು ಕೆಜಿಗೆ ₹100 ರಿಂದ ₹120 ಇತ್ತು.
ಬಾಗಿನ ನೀಡುವ ಅರಿಸಿನ–ಕುಂಕುಮ, ಕನ್ನಡಿ, ಬಾಚಣಿಕೆ, ಬಾಲೆ ಬಂಗಾರ, ರಾಖಿ ಸೇರಿದಂತೆ ಇತರೆ ವಸ್ತುಗಳನ್ನು ಪ್ಲಾಸ್ಟಿಕ್ ಡಬ್ಬ ಮತ್ತು ಕವರಿನಲ್ಲಿ ತುಂಬಿ, ₹20 ರಿಂದ ₹100 ರವರೆಗೆ ಮಾರಾಟ ಮಾಡಿದರು.
‘ಬಾಗಿನ ನೀಡುವ ಬದಲು, ಹಣವನ್ನು ನೇರವಾಗಿ ಆನ್ ಲೈನ್ ಹಾಕುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದೆ ಮತ್ತು ಇತ್ತೀಚಿನ ದಿನಗಳಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಜೋರಾಗಿ ಆಚರಣೆ ಮಾಡುವುದರಿಂದ ವ್ಯಾಪಾರ ಕಡಿಮೆಯಾಗಿದೆ’ ಎಂದು ಬಾಳೆಹಣ್ಣು ವ್ಯಾಪಾರಿ ಸ್ವಾಮಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.