ADVERTISEMENT

ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೀಡಿ: ಬಿ.ಆರ್.ಗುರುದೇವ್

ಅಖಿಲ‌ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಗುರುದೇವ್

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 12:08 IST
Last Updated 27 ನವೆಂಬರ್ 2020, 12:08 IST
ಬಿ.ಆರ್‌. ಗುರುದೇವ್‌
ಬಿ.ಆರ್‌. ಗುರುದೇವ್‌   

ಹಾಸನ: ಬಿಜೆಪಿಗೆ ಜಿಲ್ಲೆಯ ಕೊಡುಗೆ ಅಪಾರವಾಗಿದ್ದು, ಯಾವುದಾದರೂ ನಿಗಮ, ಮಂಡಳಿಗೆ ಸಮುದಾಯದ ಒಬ್ಬರಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಅಖಿಲ‌ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಬಿ.ಆರ್.ಗುರುದೇವ್ ಒತ್ತಾಯಿಸಿದರು.

ನಿಗಮ, ಮಂಡಳಿಗೆ ಒಂದಿಬ್ಬರನ್ನು ನಾಮ ನಿರ್ದೇಶನ ಮಾಡಿರುವುದನ್ನು ಹೊರತು ಪಡಿಸಿದರೆ ಪ್ರಮುಖ ಸ್ಥಾನ ನೀಡಿಲ್ಲ. ಜಿಲ್ಲೆಯನ್ನು ಸರ್ಕಾರ ಏಕೆ ಕಡೆಗಣಿಸಿದೆಯೋ ಗೊತ್ತಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.‌

ಸಮುದಾಯದ ಬಡವರಿಗೆ ಅನುಕೂಲ ಆಗಲಿ ಎಂಬ ಕಾರಣಕ್ಕೆ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಸ್ಥಾಪನೆ
ಮಾಡಿರುವುದು ಒಳ್ಳೆಯ ಬೆಳವಣಿಗೆ. ಅದೇ ರೀತಿ ಸಮುದಾಯವನ್ನು ಕೇಂದ್ರ ಒಬಿಸಿ ಪಟ್ಟಿಗೆ ಸೇರಿಸಬೇಕು ಎಂದು
ಆಗ್ರಹಿಸಿದರು.

ADVERTISEMENT

‘2004ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಪರವಾಗಿ‌ ಕೆಲಸ ಮಾಡಿದ್ದರಿಂದ ಸಂಘಟನೆ ಗುರುತಿಸಿ ಎಚ್‌.ಡಿ.
ದೇವೇಗೌಡ ಹಾಗೂ ಎಚ್‌.ಡಿ. ರೇವಣ್ಣ ಅವರು ವಿಧಾನ ಪರಿಷತ್‌ ಸದಸ್ಯನನ್ನಾಗಿ ಮಾಡಿದರು. ಕ್ಷೇತ್ರದ ಶಾಸಕರ ಜೊತೆ ವೈಮನಸ್ಸು ಉಂಟಾಯಿತು. ಆಗ ಜೆಡಿಎಸ್‌ ವರಿಷ್ಠರು ನನ್ನ ಮಾತಿಗೆ ಬೆಲೆ ಕೊಡಲಿಲ್ಲ. ಹಾಗಾಗಿ ಬಿಜೆಪಿ ಸೇರಬೇಕಾಯಿತು. ಬಳಿಕ ಬಿ.ಎಸ್‌. ಯಡಿಯೂರಪ್ಪ ಸೂಚನೆಯಂತೆ ವಿಧಾನ ಪರಿಷತ್‌ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದೆ. 11 ವರ್ಷದಿಂದ ಗುರುತಿಸಿಲ್ಲ. ಪಕ್ಷದ ಯಾವುದೇ ಹುದ್ದೆ ನೀಡಿಲ್ಲ’ಎಂದರು.

ಗೋಷ್ಠಿಯಲ್ಲಿ ಅಖಿಲ‌ ಭಾರತ ವೀರಶೈವ ಮಹಾಸಭಾದ ಮುಖಂಡರಾದ ಭುವನಾಕ್ಷ, ಕಟ್ಟಾಯ ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.