ಹಾಸನ: ಇಲ್ಲಿನ ವಿಜಯ ನಗರ ಬಡಾವಣೆಯಲ್ಲಿ ಮನೆಯ ಬೀಗ ಮುರಿದು ಮನೆಯಲ್ಲಿದ್ದ ಸುಮಾರು ₹9.23 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹1.35 ಲಕ್ಷ ನಗದು ಕಳವು ಮಾಡಲಾಗಿದೆ.
ಸೌಮ್ಯಾ ಎ.ಆರ್. ಅವರು ನಗರದ ದೇವರಾಯಪಟ್ಟಣದ ಹತ್ತಿರ ಇರುವ ಟಿಪ್‍ಟಾಪ್ ಫರ್ನಿಚರ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜೂನ್ 12 ರಂದು ಬೆಳಿಗ್ಗೆ 10 ಗಂಟೆಗೆ ಮನೆಗೆ ಬೀಗ ಹಾಕಿ ಕೆಲಸಕ್ಕೆ ಹೋಗಿದ್ದರು. ಸಂಜೆ 4.30 ಕ್ಕೆ ಸೌಮ್ಯ ಅವರ ಮಗ ಕರೆ ಮಾಡಿ, ಮನೆಯ ಬೀಗ ತೆರೆದಿರುವುದಾಗಿ ತಿಳಿಸಿದ್ದಾನೆ. ಮನೆಗೆ ಬಂದು ನೋಡಿದಾಗ, ಮನೆಯ ಬೀಗ ಮುರಿದಿರುವುದು ಗೊತ್ತಾಗಿದೆ.
ಬೀರುವಿನಲ್ಲಿಟ್ಟಿದ್ದ ಒಂದು ಚಿನ್ನದ ಸರ, ಉಂಗುರ, ಓಲೆ, ಹ್ಯಾಂಗಿಂಗ್ಸ್, ಹರಳಿನ ಓಲೆ, ಚಿನ್ನದ ಬಳೆ ಸೇರಿದಂತೆ ₹9.23 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಲಾಗಿದೆ. ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
25 ಗ್ರಾಂ ಚಿನ್ನದ ಸರ ಕಳವು
ಹಾಸನ: ಅರಸೀಕೆರೆ ತಾಲ್ಲೂಕಿನ ಬಾಣಾವರ ಬಸ್‌ನಿಲ್ದಾಣದಿಂದ ಯಗಟಿಪುರಕ್ಕೆ ಹೋಗುವ ಬಸ್ ಹತ್ತುವ ವೇಳೆ, ಮಹಿಳೆಯ ಕೊರಳಲ್ಲಿದ್ದ ಚಿನ್ನದ ಸರವನ್ನು ಕಳವು ಮಾಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಸಾಣೇಹಳ್ಳಿಯ ರುದ್ರಮ್ಮ ಅವರು ಈಚೆಗೆ ಬಾಣಾವರ ಬಸ್ ನಿಲ್ದಾಣದಲ್ಲಿ ಯಗಟಿಪುರ ಬಸ್ ಹತ್ತುತ್ತಿದ್ದರು. ಬಸ್ ಒಳಗೆ ಹೋಗಿ ನೋಡಿಕೊಂಡಾಗ ಕೊರಳಿನಲ್ಲಿದ್ದ ₹1.50 ಲಕ್ಷ ಮೌಲ್ಯದ 25 ಗ್ರಾಂ ಚಿನ್ನದ ಸರ ಇರಲಿಲ್ಲ. ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.