ADVERTISEMENT

ಹಳೇಬೀಡು: ದಾಖಲಾತಿ ಆರಂಭ

ಗ್ಯಾರಂಟಿ ತಾಲ್ಲೂಕು ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 31 ಮೇ 2025, 15:58 IST
Last Updated 31 ಮೇ 2025, 15:58 IST
ಅರಸೀಕೆರೆಯಲ್ಲಿ ಗ್ಯಾರಂಟಿ ಯೋಜನೆ ತಾಲ್ಲೂಕು  ಸಮಿತಿ ಸಭೆ ಶನಿವಾರ ಗೀಜಿಹಳ್ಳಿ ಧರ್ಮಶೇಖರ್‌ ಅಧ್ಯಕ್ಷತೆಯಲ್ಲಿ ನಡೆಯಿತು 
ಅರಸೀಕೆರೆಯಲ್ಲಿ ಗ್ಯಾರಂಟಿ ಯೋಜನೆ ತಾಲ್ಲೂಕು  ಸಮಿತಿ ಸಭೆ ಶನಿವಾರ ಗೀಜಿಹಳ್ಳಿ ಧರ್ಮಶೇಖರ್‌ ಅಧ್ಯಕ್ಷತೆಯಲ್ಲಿ ನಡೆಯಿತು    

ಹಳೇಬೀಡು: ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮ ತರಗತಿಗಳಿಗೆ ಹಳೇಬೀಡಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದೆ.

ಸುಸಜ್ಜಿತ ಕಟ್ಟಡ ಹಾಗೂ ವಿಶಾಲವಾದ ಮೈದಾನ ಹೊಂದಿರುವ ಶಾಲೆಯಲ್ಲಿ ಪೂರ್ವ ಪ್ರಾಥಮಿಕದಿಂದ ಪಿಯುಸಿ ವರೆಗೆ ಕಲಿಯಲು ಅವಕಾಶವಿದೆ.   ಪಿಯುಸಿ ಕಲೆ, ವಾಣಿಜ್ಯ ಹಾಗೂ ವಿಜ್ಞಾನ ವಿಷಯಗಳನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬಹುದು.  ಮಾಹಿತಿಗೆ 7892164698, 9448764776, 9902753011 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬೇಕು ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷ ಬಿ.ಎಸ್.ಸೋಮಶೇಖರ್ ತಿಳಿಸಿದ್ದಾರೆ.

‘ಪಡಿತರ ಸಮರ್ಪಕ ವಿತರಿಸಿ’

ADVERTISEMENT

ಅರಸೀಕೆರೆ: ರಾಜ್ಯದ ಕಾಂಗ್ರೆಸ್‌ ಸರ್ಕಾರ 2  ವರ್ಷ ಪೂರೈಸಿದ್ದು ಗ್ಯಾರಂಟಿಗಳು ಮುಂದುವರಿಸಿ ಜನರ ಬದುಕು ಉತ್ತಮವಾಗಲು ಸಹಕಾರಿಯಾಗುತ್ತಿವೆ ಎಂದು ಗ್ಯಾರಂಟಿ ಸಮಿತಿ ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್‌ ಹೇಳಿದರು. ನಗರದಲ್ಲಿ ಶನಿವಾರ ನಡೆದ ಗ್ಯಾರಂಟಿ ಸಮಿತಿಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯ ದಿವಾಳಿಯಾಗುತ್ತದೆ ಎಂದು ವಿರೋಧಪಕ್ಷದವರೂ ಟೀಕಿಸಿದ್ದರು. ಆದರೆ  ಜನರಿಗೆ ಆರ್ಥಿಕಹೊರೆ   ಕಡಿಮೆಯಾಗಲು ಕಾರಣವಾಗಿದೆ. ಪಡಿತರ ಅಂಗಡಿಗಳವರು ಸಾಮಗ್ರಿ ಸಮರ್ಪಕವಾಗಿ ವಿತರಿಸಬೇಕು. ಆರೋಪಗಳು ಬರದಂತೆ ನಿಗಾವಹಿಸಬೇಕು ಎಂದು ಹೇಳಿದರು.ಐದು ಗ್ಯಾರಂಟಿಗಳ ಪ್ರಗತಿ ಬಗ್ಗೆ  ಅಧಿಕಾರಿಗಳಿಂದ ಮಾಹಿತಿ ಪಡೆದರು.  ಸಮಿತಿ ಉಪಾಧ್ಯಕ್ಷ ಜವನಪ್ಪ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಸತೀಶ್‌ ಸದಸ್ಯರಾದ ಜಾಜೂರು ಸಿದ್ದೇಶ್‌ ಪ್ರದೀಪ್‌ ಲೋಕಣ್ಣ ಪರಮೇಶ್‌ಬಸವರಾಜು ವಿರೂಪಾಕ್ಷ ಶಿವಕುಮಾರ್‌ ಲೋಕೇಶ್‌ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.