ADVERTISEMENT

ಹೊಳೆನರಸೀಪುರ: 68ನೇ ವರ್ಷದ ಗಣೇಶೋತ್ಸವ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 5:09 IST
Last Updated 30 ಆಗಸ್ಟ್ 2025, 5:09 IST
ಹೊಳೆನರಸೀಪುರದಲ್ಲಿ 68ನೇ ವರ್ಷದ ಗಣೇಶೋತ್ಸವಕ್ಕೆ ಶಾಸಕ ಎಚ್.ಡಿ. ರೇವಣ್ಣ ಬುಧವಾರ ಚಾಲನೆ ನೀಡಿದರು. ಪುರಸಭಾಧ್ಯಕ್ಷ ಎಚ್.ಕೆ. ಪ್ರಸನ್ನ, ಕಾರ್ಯಾಧ್ಯಕ್ಷ ಎಚ್.ಎಸ್. ಪುಟ್ಟಸೋಮಪ್ಪ, ಪುರಸಭಾ ಸದಸ್ಯ ಎ. ಜಗನ್ನಾಥ್ ಇತರರು ಇದ್ದಾರೆ
ಹೊಳೆನರಸೀಪುರದಲ್ಲಿ 68ನೇ ವರ್ಷದ ಗಣೇಶೋತ್ಸವಕ್ಕೆ ಶಾಸಕ ಎಚ್.ಡಿ. ರೇವಣ್ಣ ಬುಧವಾರ ಚಾಲನೆ ನೀಡಿದರು. ಪುರಸಭಾಧ್ಯಕ್ಷ ಎಚ್.ಕೆ. ಪ್ರಸನ್ನ, ಕಾರ್ಯಾಧ್ಯಕ್ಷ ಎಚ್.ಎಸ್. ಪುಟ್ಟಸೋಮಪ್ಪ, ಪುರಸಭಾ ಸದಸ್ಯ ಎ. ಜಗನ್ನಾಥ್ ಇತರರು ಇದ್ದಾರೆ   

ಹೊಳೆನರಸೀಪುರ: ಪಟ್ಟಣದಲ್ಲಿ 68ನೇ ವರ್ಷದ ಗಣೇಶೋತ್ಸವಕ್ಕೆ ಶಾಸಕ ಎಚ್.ಡಿ. ರೇವಣ್ಣ ಬುಧವಾರ ಚಾಲನೆ ನೀಡಿದರು.

ಕಳೆದ 68 ವರ್ಷಗಳಿಂದ ನಡೆಯುತ್ತಿರುವ ಗಣೇಶೋತ್ಸವ ಈ ವರ್ಷವೂ ಶ್ರದ್ಧಾಭಕ್ತಿಯಿಂದ ನಡೆಯಲಿ. ಎಲ್ಲ ರೀತಿಯ ಸಹಕಾರ ನೀಡುತ್ತೇನೆ. ಈ ವರ್ಷವೂ ಮಹಾಗಣಪತಿ ಹೋಮ, ಅನ್ನ ಸಂತರ್ಪಣೆ ನಡೆಸುವಂತೆ ಸಮಿತಿಯ ಸದಸ್ಯರಿಗೆ ತಿಳಿಸಿದರು.

ಒಂದು ತಿಂಗಳ ಕಾಲ ಗಣೇಶೋತ್ಸವ ನಡೆಸಿ ಆಗಸ್ಟ್ 27ರ ರಾತ್ರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಲಾ ತಂಡದೊಂದಿಗೆ ಮೆರವಣಿಗೆ ನಡೆಸಿ, 28ರಂದು ಮಧ್ಯಾಹ್ನ ತೆಪ್ಪೋತ್ಸವ ನಡೆಸಿ, ವಿಸರ್ಜಿಸಲಾಗುವುದು ಎಂದು ಸಮಿತಿಯ ಕಾರ್ಯಾಧ್ಯಕ್ಷ ಎಸ್.ಎಸ್. ಪುಟ್ಟಸೋಮಪ್ಪ ತಿಳಿಸಿದರು.

ADVERTISEMENT

1 ತಿಂಗಳ ಅವಧಿ ಪೂರ್ತಿ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿ ದಿನವು ಬೆಳಿಗ್ಗೆ ಗಣೇಶನಿಗೆ ವಿಶೇಷ ಅಲಂಕಾರ ಮಾಡಿ, 12 ಗಂಟೆಗೆ ಮಹಾ ಮಂಗಳಾರತಿ ಮಾಡಿ ನಂತರ ಸಾರ್ವಜನಿಕರಿಗೆ ಪ್ರಸಾದ ನೀಡಲಾಗುವುದು. ಮಹಾಗಣಪತಿ ಪೆಂಡಾಲ್ ವೇದಿಕೆಯಲ್ಲಿ ದಿನವೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಗೀತ, ದೇವರನಾಮ, ನಾಟಕ, ನೃತ್ಯ, ಆರ್ಕೆಷ್ಟ್ರಾ, ರಂಗಗೀತೆ, ಜನಪದ ಗೀತೆ ಹಾಸ್ಯ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿವರಿಸಿದರು.

ಸಮಿತಿ ಅಧ್ಯಕ್ಷ ಪುರಸಭಾಧ್ಯಕ್ಷ ಎಚ್.ಕೆ. ಪ್ರಸನ್ನ, ಪುರಸಭಾ ಸದಸ್ಯ ಎ. ಜಗನ್ನಾಥ್, ಸುರೇಶ್‍ಕುಮಾರ್, ಎನ್.ಎಸ್. ರಾಧಾಕೃಷ್ಣ, ಎಸ್.ಗೋಕುಲ್, ವೈ.ವಿ. ಚಂದ್ರಶೇಖರ್, ಎಚ್.ಎಸ್. ಸುದರ್ಶನ್, ಆರ್.ಬಿ. ಪುಟ್ಟೇಗೌಡ, ಎಲೆಕ್ಟ್ರಿಕ್ ಲೋಕಿ, ಮಿಲ್‍ ಶಿವಣ್ಣ, ಶಿವಕುಮಾರ್, ಸ್ಟುಡಿಯೊ ಅಶೋಕ್, ಡಿಶ್ ಗೋವಿಂದ, ಕಿಶೋರ್, ಮಹೇಶ್, ತಮ್ಮಯ್ಯ, ಚೆನ್ನೇಗೌಡ, ಮತ್ತಿಗೆ ರಾಜೇಗೌಡ, ನರಸಿಂಹಶೆಟ್ಟಿ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.