ಹೊಳೆನರಸೀಪುರ: ಪುರಸಭೆಯ ನೌಕರರು ನಾಲ್ಕು ದಿನಗಳಿಂದ ನಡೆಸುತ್ತಿದ್ದ ಮುಷ್ಕರವನ್ನು ರಾಜ್ಯ ಪೌರ ನೌಕರರ ಸಂಘದ ನಿರ್ದೇಶನದಂತೆ ಮುಷ್ಕರವನ್ನು ಹಿಂಪಡೆದಿದ್ದಾರೆ.
ಕರ್ತವ್ಯಕ್ಕೆ ಹಾಜರಾಗಿವ ಮುನ್ನ ಸಭಾಂಗಣದಲ್ಲಿ ಸಭೆಯಲ್ಲಿ ಮಾತನಾಡಿದ ಕಂದಾಯಾಧಿಕಾರಿ ನಾಗೇಂದ್ರ ಮುಷ್ಕರಕ್ಕೆ ಬೆಂಬಲ ನೀಡಿದ ಸಾರ್ವಜನಿಕರಿಗೆ, ಬೇಡಿಕೆ ಈಡೇರಿಸುವ ಭರವಸೆ ನೀಡಿರುವ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.
ಪೌರ ನೌಕರರ ಸಂಘದ ಅಧ್ಯಕ್ಷ ಕೆ.ಕೆ. ಸುನೀಲ್. ಉಪಾಧ್ಯಕ್ಷ ವೆಂಕಟೇಶ್, ಅಧಿಕಾರಿಗಳಾದ ರಮೇಶ್, ಹೇಮಂತ್, ಆರೋಗ್ಯಾಧಿಕಾರಿ ವಸಂತಕುಮಾರ್, ನೌಕರರಾದ ಶೇಖರ್, ಮಹಮದ್ ಹುಸೇನ್ ಮೋಹನ್ ಅಬ್ಬಾಸ್, ನಾಗರಾಜು, ಶಿವರಾಜು, ಬೈರೇಶ, ಮಂಜುನಾಥ್, ಚಲುವ, ಸ್ವಾಮಿ, ರಾಜು, ಕಿಶೋರ್, ಆನಂದ, ಮಂಜು, ಚಂದು, ಕಿರಣ್, ಸಂದೀಪ್, ಪ್ರಜ್ವಲ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.