ಹೊಳೆನರಸೀಪುರ: ದೇವಾಂಗ ಬಡಾವಣೆಯ ರಾಮಮಂದಿರದಲ್ಲಿ ದೇವಾಂಗ ಜನಾಂಗದವರು ಮಂಗಳವಾರ ಹೋಳಿ ಆಡಿ ಸಂಭ್ರಮಿಸಿದರು.
ಉತ್ಸವ ಮೂರ್ತಿಯನ್ನು ಪೂಜಿಸಿ ಉತ್ಸವದ ಜೊತೆಯಲ್ಲಿ ತರುವಾಗ ಮನೆಗಳ ಮುಂದೆ ಇಟ್ಟಿರುವ ಹೋಳಿ ನೀರನ್ನು ಎಲ್ಲರೂ ಪರಸ್ಪರ ಎರಚಿಕೊಂಡು ದೇವರ ಹಡ್ಡೆ ಹೊತ್ತವರ ಮೇಲೆ ಹೋಳಿ ನೀರನ್ನು ಸುರಿದರು. ಇತರರು ಹಡ್ಡೆ ಹೊತ್ತವರನ್ನು ತಬ್ಬಿ ಹಿಡಿದು ಹೋಳಿ ನೀರನ್ನು ತಮ್ಮ ಮೇಲೆಯೂ ಬೀಳಿಸಿಕೊಂಡರು. ಇದಕ್ಕೂ ಮುನ್ನ ಎಲ್ಲರೂ ಪರಸ್ಪರ ಕೆಂಪು, ನೀಲಿ, ಹಸಿರು ಬಣ್ಣಗಳನ್ನು ಬಳಿದುಕೊಂಡು ಒಬ್ಬರಿಗೊಬ್ಬರು ಗುರುತು ಸಿಗದಂತಾಗಿದ್ದರು. ನಂತರ ಹೇಮಾವತಿ ನದಿಯಲ್ಲಿ ಮುಳುಗಿ ಬಣ್ಣ ತೆಗೆದು ಮತ್ತೆ ಉತ್ಸವದ ಜೊತೆ ರಾಮಮಂದಿರಕ್ಕೆ ಬಂದರು. ಉತ್ಸವ ಸಾಗುವ ಮಾರ್ಗದಲ್ಲಿ ಹೋಳಿ ಆಚರಿಸುವವರಿಗೆ ಪಾನಕ, ಮಜ್ಜಿಗೆ, ಕೊಸಂಬರಿ ವಿತರಿಸಲಾಯಿತು.
ಪುರಸಭಾ ಸದಸ್ಯ ಎ.ಜಗನ್ನಾಥ್, ದೇವಾಂಗ ಯುವಕ ಸಂಘದ ಎಚ್.ಆರ್. ಶಂಕರ್, ರವೀಂದ್ರ, ಶ್ರೀಧರ್, ದೀಪಕ್, ಶಶಿ, ವಿನೋಧ, ಕುಮಾರ್, ಅಮಿತ್, ಎಚ್.ಡಿ.ವಸಂತ, ಅನಿಲ್, ಮಂಜುನಾಥ್, ಎಲೆಕ್ಟ್ರಿಕ್ ರಾಮು, ಕೃಷ್ಣ, ಬಾಬು, ಪೂಜಿತ್, ರಾಹುಲ್, ರೇವಂತ್, ದೃತಿ, ಪುಣ್ಯ, ಸ್ವಾತಿ, ದರ್ಶಿನಿ, ಸುಧಾ, ಚಾರ್ಮಿ, ಚಿನ್ಮಯ್, ಉಲ್ಲಾಸ್, ಧನಿಷ್ಕ, ದೋಷಿಕಾ ಹೋಳಿ ಆಡಿ ಸಂಭ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.