ADVERTISEMENT

12 ಚಿನ್ನದ ಪದಕ ಪಡೆದ ವಿದ್ಯಾರ್ಥಿನಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2024, 13:34 IST
Last Updated 18 ಮಾರ್ಚ್ 2024, 13:34 IST
ಬೇಲೂರಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಜಿ.ಆರ್.ಸಂಯಮ ಅವರನ್ನು ಅಖಿಲ ಭಾರತ ವೀರಶೈವ, ಲಿಂಗಾಯತ ಮಹಾಸಭಾ ತಾಲ್ಲೂಕು ಮಹಿಳಾ ಘಟಕದಿಂದ ಅಭಿನಂದಿಸಲಾಯಿತು. ಪ್ರಮುಖರಾದ ಪುಷ್ಪ, ಅನ್ನಪೂರ್ಣ ಚಂದ್ರಶೇಖರ್, ಹೇಮಾ, ಸೌಭಾಗ್ಯ ಪಾಲ್ಗೊಂಡಿದ್ದರು
ಬೇಲೂರಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಜಿ.ಆರ್.ಸಂಯಮ ಅವರನ್ನು ಅಖಿಲ ಭಾರತ ವೀರಶೈವ, ಲಿಂಗಾಯತ ಮಹಾಸಭಾ ತಾಲ್ಲೂಕು ಮಹಿಳಾ ಘಟಕದಿಂದ ಅಭಿನಂದಿಸಲಾಯಿತು. ಪ್ರಮುಖರಾದ ಪುಷ್ಪ, ಅನ್ನಪೂರ್ಣ ಚಂದ್ರಶೇಖರ್, ಹೇಮಾ, ಸೌಭಾಗ್ಯ ಪಾಲ್ಗೊಂಡಿದ್ದರು   

ಬೇಲೂರು: ಸಸ್ಯಶಾಸ್ತ್ರ ವಿಭಾಗದ ಪದವಿ ಪರೀಕ್ಷೆಯಲ್ಲಿ 12 ಚಿನ್ನದ ಪದಕ ಹಾಗೂ ನಗದು ಬಹುಮಾನ ಪಡೆದ ತಾಲ್ಲೂಕಿನ ಜಿ.ಆರ್.ಸಂಯಮ ಅವರನ್ನು ಅಖಿಲ ಭಾರತ ವೀರಶೈವ, ಲಿಂಗಾಯತ ಮಹಾಸಭಾ ತಾಲ್ಲೂಕು ಮಹಿಳಾ ಘಟಕದಿಂದ ಅಭಿನಂದಿಸಲಾಯಿತು.

ವಿದ್ಯಾರ್ಥಿನಿ ಜಿ.ಆರ್.ಸಂಯಮ ಅವರನ್ನು ಅಭಿನಂದಿಸಿ ಮಾತನಾಡಿದ ಅಖಿಲ ಭಾರತ ವೀರಶೈವ, ಲಿಂಗಾಯತ ಮಹಾಸಭಾ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಅನ್ನಪೂರ್ಣ ಚಂದ್ರಶೇಖರ್, ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡುತಿದ್ದಾರೆ. ಅಡುಗೆ ಮನೆಯಿಂದ ಅಂತರಿಕ್ಷದವರೆಗೆ ಮಹಿಳೆಯರ ಸಾಧನೆ ಸಾಕಷ್ಟಿದೆ ಎಂದರು. ಜಿ.ಆರ್.ಸಂಯಮ ಉತ್ತಮ ಸಾಧನೆ ಮಾಡಿದ್ದು, ಇವರು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ ಎಂದರು.

ಮಹಾಸಭಾ ತಾಲ್ಲೂಕು ಮಹಿಳಾ ಘಟಕದ ಪ್ರಧಾನಕಾರ್ಯದರ್ಶಿ ಹೇಮಾ, ರಾಜ್ಯ ಮಹಿಳಾ ಘಟಕದ ಸದಸ್ಯ ಜಯಶೀಲ ಜಯಶಂಕರ್, ನಿರ್ದೇಶಕರಾದ ಪ್ರೇಮಲೀಲಾ, ಸೌಭಾಗ್ಯ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.