ADVERTISEMENT

ಅರಸೀಕೆರೆ: ತಮಿಳುನಾಡಿನಲ್ಲಿ ನಿರ್ಮಿಸಿದ ಗಣಪತಿ ಮೂರ್ತಿ ಪ್ರತಿಷ್ಠಾಪನೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 14:21 IST
Last Updated 11 ಸೆಪ್ಟೆಂಬರ್ 2024, 14:21 IST
ಅರಸೀಕೆರೆ ನಗರದ ಸುಬ್ರಮಣ್ಯ ನಗರದಲ್ಲಿ  ತಮಿಳುನಾಡಿನ ಹೊಸೂರಿನಲ್ಲಿ ನಿರ್ಮಾಣವಾದ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ
ಅರಸೀಕೆರೆ ನಗರದ ಸುಬ್ರಮಣ್ಯ ನಗರದಲ್ಲಿ  ತಮಿಳುನಾಡಿನ ಹೊಸೂರಿನಲ್ಲಿ ನಿರ್ಮಾಣವಾದ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ   

ಅರಸೀಕೆರೆ: ನಗರದ ಸುಬ್ರಹ್ಮಣ್ಯ ನಗರದಲ್ಲಿ ತಮಿಳುನಾಡಿನ ಹೊಸೂರಿನಲ್ಲಿ ನಿರ್ಮಾಣವಾದ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿದ್ದು ವಿಶೇಷ ಎನಿಸಿದೆ.

ಇಲ್ಲಿ ಕಳೆದ 17 ವರ್ಷಗಳಿಂದ ಗಣಪತಿ ಪ್ರತಿಷ್ಠಾಪಿಸಲಾಗುತ್ತಿದೆ. ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಿಲ್ಪಿ ಹಾರನಹಳ್ಳಿ ಮಹದೇವ್‌ ಹಾಗೂ ಇತರರು ಒಂದೇ ಶೈಲಿ ಮೂರ್ತಿ ತಯಾರಿಸುತ್ತಾರೆ. ಅದಕ್ಕಾಗಿ ಮೂರ್ತಿ ವಿಶೇಷವಾಗಿರಬೇಕು ಎಂಬ ವಿಚಾರದಿಂದ ತಮಿಳುನಾಡಿನ ಹೊಸೂರಿನಲ್ಲಿ ನಿರ್ಮಾಣವಾದ ₹ 60 ಸಾವಿರ ವೆಚ್ಚದ ಗಣಪತಿ ಮೂರ್ತಿ ಕೂರಿಸಿದ್ದು ನೋಡಲು ಸುಂದರ ಹಾಗೂ ವಿಶೇಷವಾಗಿದೆ.

‘ಹಿಂದೂ ಜಾಗರಣ ವೇದಿಕೆ ಆಶ್ರಯದಲ್ಲಿ ಶ್ರೀ ವಿದ್ಯಾ ಗಣಪತಿ ಆಸ್ಥಾನ ಮಂಟಪದಲ್ಲಿ 10 ಅಡಿಯ ಆಕರ್ಷಕ ಗಣಪತಿ ಪ್ರತಿಷ್ಠಾಪಿಸಿದ್ದು ಕಿರೀಟದ ಮೇಲೆ ಕೃಷ್ಣ ಪರಮಾತ್ಮ ಇದ್ದು ಮೂರ್ತಿ ಜನರ ಕಣ್ಮನ ಸೆಳೆಯುತ್ತಿದೆ.  ಅಲ್ಲದೇ ಜಿಲ್ಲೆಯ ಬೇರೆಡೆ ಈ ತರಹದ ಮೂರ್ತಿ ಪ್ರತಿಷ್ಠಾಪಿಸಿಲ್ಲ’ ಎನ್ನುತ್ತಾರೆ ರುದ್ರಾಕ್ಷಿ ಫೌಂಡೇಷ‌ನ್‌ನ ಜಯಪ್ರಕಾಶ್‌ ಗುರೂಜಿ.

ADVERTISEMENT

ಸುಬ್ರಹ್ಮಣ್ಯ ನಗರದ 4ನೇ ಅಡ್ಡರಸ್ತೆಯಲ್ಲಿರುವ ಗಣಪತಿ ಮೂರ್ತಿ ನೋಡಲು ನಗರದ ಜನತೆ ಮುಗಿ ಬಿದ್ದಿದ್ದಾರೆ. ಸೆ. 19ರಂದು ವಿವಿಧ ಕಲಾ ತಂಡಗಳೊಂದಿಗೆ ವಿಸರ್ಜನಾ ಮಹೋತ್ಸವ ಹಮ್ಮಿಕೊಳ್ಳಲಾಗಿದ್ದು ಕ್ರೇನ್‌ ಮೂಲಕ ಮೆರವಣಿಗೆ ನಡೆಸಿ ವಿಸರ್ಜಿಸಲಾಗುತ್ತದೆ ಎಂದು ಭಕ್ತ ಮಂಡಳಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.