ADVERTISEMENT

ಕೊಣನೂರು: ಗಾಂಜಾ ಮಾರುತ್ತಿದ್ದವರು ಪೊಲೀಸ್ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 14:20 IST
Last Updated 10 ಮಾರ್ಚ್ 2025, 14:20 IST
ಗಾಂಜಾ ಸೊಪ್ಪಿನೊಂದಿಗೆ ಸಬ್ ಇನ್ಸ್ಪೆಕ್ಟರ್ ಕೆ.ಎನ್.ಗಿರೀಶ್ ಮತ್ತು ಪೊಲೀಸ್ ಸಿಬ್ಬಂದಿ.
ಗಾಂಜಾ ಸೊಪ್ಪಿನೊಂದಿಗೆ ಸಬ್ ಇನ್ಸ್ಪೆಕ್ಟರ್ ಕೆ.ಎನ್.ಗಿರೀಶ್ ಮತ್ತು ಪೊಲೀಸ್ ಸಿಬ್ಬಂದಿ.   

ಕೊಣನೂರು: ಗಾಂಜಾ ಮಾರಲು ಯತ್ನಿಸುತ್ತಿದ್ದ ಇಬ್ಬರನ್ನು ಮಾಲು ವಶಕ್ಕೆ ಪಡೆದ ಕೊಣನೂರು ಪೊಲೀಸರು ಆರೋಪಿಗಳನ್ನು ಬಂಧಿಸಿದರು.

 ಇಲ್ಲಿನ ರಾಮನಾಥಪುರದ ಐಬಿ ಸರ್ಕಲ್‌‌‌ನಲ್ಲಿ ಮಾರ್ಚ್10ರ ಬೆಳಿಗ್ಗೆ 10.30ರ ಸಮಯದಲ್ಲಿ ಸ್ಥಳೀಯ ಹುಡುಗರನ್ನು ಬಳಿ ಗಾಂಜಾ ಇದೆ ಖರೀದಿಸಿ ಎಂದು ಒತ್ತಾಯಿಸಿದ ಮಾಹಿತಿ ತಿಳಿದ ಪೊಲೀಸ್ ಠಾಣೆ ಸಬ್ ಇನ್‌‌‌ಸ್ಪೆಕ್ಟರ್ ಕೆ.ಎನ್.ಗಿರೀಶ್ ತಂಡ ದಾಳಿ ನಡೆಸಿದೆ.

 ಒರಿಸ್ಸಾ ಮೂಲದ ಸಮೀರ್ ಪ್ರಧಾನ್ (47) ಗೀತಾಪ್ರಧಾನ್ (26)ರನ್ನು ಮತ್ತು ಅವರ ಬಳಿಯಿದ್ದ 10.6 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ADVERTISEMENT
ಸಮೀರ್ ಪ್ರಧಾನ್ ಭಾವಚಿತ್ರ.
ಗೀತಾಪ್ರಧಾನ್    ಭಾವಚಿತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.