ADVERTISEMENT

ಸಿದ್ದರಾಮಯ್ಯ ಯಾವೂರ ದಾಸಯ್ಯ: ಎಚ್‌ಡಿಕೆ ಆಕ್ರೋಶ

ದೇವೇಗೌಡರ ಮೇಲೆ ಪ್ರಮಾಣದ ಸವಾಲ್‌

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2022, 15:36 IST
Last Updated 20 ಏಪ್ರಿಲ್ 2022, 15:36 IST
ಎಚ್.ಡಿ.ಕುಮಾರಸ್ವಾಮಿ
ಎಚ್.ಡಿ.ಕುಮಾರಸ್ವಾಮಿ   

ಹಾಸನ: ‘ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಜೆಡಿಎಸ್ ವರಿಷ್ಠಎಚ್.ಡಿ.ದೇವೇಗೌಡರ ಮೇಲೆ ಪ್ರಮಾಣ ಮಾಡುವಂತೆ ಹೇಳಲು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಯಾವೂರ ದಾಸಯ್ಯ’ ಎಂದು ಜೆಡಿಎಸ್
ಶಾಸಕಾಂಗ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮೊದಲುನಾನು ಕೇಳಿರುವ ನಾಲ್ಕು ಪ್ರಶ್ನೆಗಳಿಗೆ ಸುಳ್ಳಿನ ರಾಮಯ್ಯ ಉತ್ತರ ನೀಡಲಿ.ಜೆಡಿಎಸ್‌ ಬಿಜೆಪಿಯ ಬಿ ಟೀಂ ಎಂದು ಅಪಪ್ರಚಾರ ಮಾಡಿ ಬಿಜೆಪಿ ಅಧಿಕಾರಕ್ಕೆ
ಬರಲು ಕಾರಣರಾದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಯೋಗ್ಯತೆಗೆ 50–60 ಸ್ಥಾನ ಮಾತ್ರ ಜಯ ಗಳಿಸಲು ಸಾಧ್ಯ’ ಎಂದುಭವಿಷ್ಯ ನುಡಿದರು.

‘ಧಾರ್ಮಿಕ ಸೌಹಾರ್ದತೆಯ ಬಗ್ಗೆ ಕಾಂಗ್ರೆಸ್‌ನವರು ಮಾತನಾಡುತ್ತಿದ್ದಾರೆ.ಇಡೀ ದೇಶದಲ್ಲಿ ಜನರು ಕಾಂಗ್ರೆಸ್ ಅನ್ನು ತಿರಸ್ಕಾರ ಮಾಡಿದ್ದಾರೆ.ಕರ್ನಾಟದಲ್ಲಿ ಸ್ವಲ್ಪ ಉಳಿದುಕೊಂಡಿದೆ. ಎರಡು ರಾಷ್ಟ್ರೀಯ ಪಕ್ಷಗಳು 150 ಸ್ಥಾನ
ಗೆಲ್ಲುವುದಾದರೆ ಜೆಡಿಎಸ್ ಬೆಂಬಲ ಯಾರಿಗೂ ಬೇಕಿಲ್ಲ’ ಎಂದರು.

ADVERTISEMENT

‘ಬೆಂಗಳೂರಿನ ಡಿ.ಜಿ. ಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದವರೇ ಬೆಂಕಿ ಹಚ್ಚಿಸಿದರು.ಅದರ ಪ್ರೇರಪಣೆಯಿಂದ ಹುಬ್ಬಳ್ಳಿಲ್ಲಿ ಗಲಭೆಯಾಯಿತು. ಸ್ಥಳೀಯ ಕಾಂಗ್ರೆಸ್‌ಮುಖಂಡರೇ ಪೊಲೀಸ್ ಸ್ಟೇಷನ್‌ ಮೇಲೆ ದಾಳಿ ಮಾಡಿಸಿದ್ದಾರೆಂದು ಸುದ್ದಿಯಾಗುತ್ತಿದೆ. ಈ ರೀತಿ ನಡೆದುಕೊಳ್ಳುವ ಕಾಂಗ್ರೆಸ್‌ ಪಕ್ಷದವರು ದೇಶದಲ್ಲಿಜಾತ್ಯತೀತೆಯನ್ನು ಉಳಿಸುತ್ತಾರಾ? ಕಳೆದ ಚುನಾವಣೆಯಲ್ಲಿ ಮಲ್ಲಿಕಾರ್ಜನಖರ್ಗೆಯವರನ್ನು ಸೋಲಿಸಲು ಎಷ್ಟು ಹಣವನ್ನು ಬಿಜೆಪಿಯಿಂದ ಸಂದಾಯ
ಮಾಡಿಕೊಂಡರು ಎನ್ನುವುದಕ್ಕೆ ಉತ್ತರ ಕೊಡಲಿ’ ಎಂದು ಸವಾಲುಹಾಕಿದರು.

‘ಪದೇ ಪದೇ ಬಿ ಟೀಂ ಎಂದು ಹೇಳುವ ನೀವು, ಇಲ್ಲಿ ಬಿಜೆಪಿ ಸರ್ಕಾರ ಬಂದಿದ್ದುಯಾರಿಂದ? ಮುಂದಿನ ಚುನಾವಣೆಯಲ್ಲಿ ಕುಮಾರಸ್ವಾಮಿ ಸಹಕಾರ ಬೇಕೆಂದುಈ ರೀತಿ ಮಾತನಾಡುತ್ತಿದ್ದೀರಾ’ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಆಡಳಿತದಲ್ಲಿ ಕಲ್ಲಪ್ಪ ಹಂಡಿಭಾಗ್‌ ಮೃತಪಟ್ಟರು. ಅರ್ಕಾವತಿ ಯೋಜನೆಯಲ್ಲಿ ನೂರಾರು ಕೋಟಿ ಲೂಟಿ ಮಾಡಿದರು. ಅದಕ್ಕೆ ಉತ್ತರ ಕೊಡಲಿ ಎಂದ ಅವರು, ಯಾವ ಪಕ್ಷದ ಜತೆಯೂ ಮೈತ್ರಿ ಮಾಡಿಕೊಳ್ಳತ್ತಿಲ್ಲ. ಹತ್ತು ತಿಂಗಳ ಹಿಂದೆಯೇ ಮಿಷನ್‌ 123 ತೀರ್ಮಾನವಾಗಿದೆ. ನೀರಾವರಿ ಯೋಜನೆ ಸೇರಿದಂತೆ ಹಲವು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಜನತೆ ಮುಂದೆ ಹೋಗುತ್ತಿದ್ದೇವೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ವಂತ ಬಲದಿಂದ ಅಧಿಕಾರ ರಚಿಸುತ್ತೇವೆ' ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.