ADVERTISEMENT

ಅಧಿಕಾರ ಸ್ವಾರ್ಥಕ್ಕಾಗಿ ಮಂಜು ಪಕ್ಷಾಂತರ: ರಮೇಶ್ ಟೀಕೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2021, 16:11 IST
Last Updated 2 ಡಿಸೆಂಬರ್ 2021, 16:11 IST

ಅರಕಲಗೂಡು: ‘ಮಾಜಿ ಸಚಿವ ಎ. ಮಂಜು ಅಧಿಕಾರದ ಸ್ವಾರ್ಥಕ್ಕಾಗಿ ಪಕ್ಷಾಂತರ ಮಾಡಿ ಇದೀಗ ಕಣ್ಣೀರು ಹಾಕುವ ನಾಟಕವಾಡಿ ಕ್ಷೇತ್ರದ ಮತದಾರರನ್ನು ವಂಚಿಸುತ್ತಿದ್ದಾರೆ’ ಎಂದು ಪೊಟ್ಯಾಟೋ ಕ್ಲಬ್ ಅಧ್ಯಕ್ಷ ಎಚ್. ಯೋಗಾ ರಮೇಶ್ ಕಿಡಿಕಾರಿದರು.

‘90ರ ದಶಕದಿಂದಲೂ ಪಕ್ಷಾಂತರ ಮಾಡುತ್ತಿರುವ ಅವರು ಮತದಾರರಿಗೆ ಹಸಿ ಸುಳ್ಳು ಹೇಳಿಅನ್ಯಾಯದ ಹಾದಿಯಲ್ಲಿ ಸಾಗಿ ದ್ದಾರೆ. ಬಿಜೆಪಿಯಲ್ಲಿದ್ದ ದಿ. ಬಿ.ಬಿ. ಶಿವಪ್ಪ, ದಿ. ಕೆ.ಎಚ್.ಹನುಮೇಗೌಡ ಇನ್ನು ಹಲವಾರು ನಾಯಕರ ದಿಕ್ಕು ತಪ್ಪಿಸಿ ಪಕ್ಷಕ್ಕೆ ಅನ್ಯಾಯವೆಸಗಿದ್ದಾರೆ. ಕಳೆದಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಬಿಜೆಪಿಗೆ ಜಿಗಿದರು’ ಎಂದು ಗುರುವಾರಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಂತ್ರಿಯಾಗಿದ್ದ ಮಂಜು ಅವರ ಆಡಳಿತ ವೈಖರಿಗೆ ಬೇಸತ್ತು ಜನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ತಿರಸ್ಕರಿಸಿದರು. ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಘಟನೆಗೆಮಗ್ಗಲು ಮುಳ್ಳಾದರು. ಕಾಂಗ್ರೆಸ್ ನಲ್ಲಿ ಅಧಿಕಾರ ಪಡೆದು ನಂತರ ಪಕ್ಷ ತೊರೆದು, ಮತ್ತೆಹಿಂಬಾಲಕರನ್ನು ಕಾಂಗ್ರೆಸ್‌ ನಾಯಕರ ಬಳಿ ಕಳುಹಿಸಿ ಪಕ್ಷಕ್ಕೆ ಸೇರಿಸಿಕೊಳ್ಳುವಂತೆಗೋಗರೆಯುವ ದಯನೀಯ ಸ್ಥಿತಿಗೆ ತಲುಪಿದ್ದಾರೆ’ ಎಂದು ವ್ಯಂಗ್ಯವಾಡಿದರು.

ADVERTISEMENT

‘ಎಚ್.ಡಿ. ರೇವಣ್ಣ ಅವರ ಕುಟುಂಬ ರಾಜಕಾರಣ ಕುರಿತು ಟೀಕಿಸುತ್ತಿದ್ದ ಮಂಜು ಈಗ ಮಗನನ್ನು ಕೊಡಗು ವಿಧಾನ ಪರಿಷತ್ ಚುನಾವಣೆಗೆ ನಿಲ್ಲಿಸಿದ್ದಾರೆ. ಪಕ್ಷದ ತತ್ವ, ಸಿದ್ದಾಂತಗಳ ಮೇಲೆ ನಂಬಿಕೆ ಇಲ್ಲ. ಬಿಜೆಪಿಯಲ್ಲೇ ಇರುವೆ ಎಂದು ಹೇಳಿ ಕೊಡಗಿನಲ್ಲಿ ಮಗನ ಪರ ರಾಜಕೀಯ ನಡೆಸುತ್ತಿದ್ದಾರೆ‌’ ಎಂದರು.

ಸುದ್ದಿಗೋಷ್ಠಿಯಲ್ಲಿ ಪೊಟ್ಯಾಟೋ ಕ್ಲಬ್ ಮುಖಂಡರಾದ ಚಂದೇಗೌಡ, ಶಿವಲಿಂಗಶಾಸ್ತ್ರಿ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.