ADVERTISEMENT

ಶಾಸಕ ಸುರೇಶ್‌ಗೆ ಅನುಭವದ ಕೊರತೆ: ನಿಶಾಂತ್

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 13:40 IST
Last Updated 1 ಆಗಸ್ಟ್ 2024, 13:40 IST
ಎಂ.ಜೆ.ನಿಶಾಂತ್
ಎಂ.ಜೆ.ನಿಶಾಂತ್   

ಬೇಲೂರು: ‘ಶಾಸಕ ಎಚ್.ಕೆ.ಸುರೇಶ್ ಅವರಿಗೆ ಅನುಭವದ ಕೊರತೆ ಇದ್ದು, ಅವರ ಸಾಧನೆ ಶೂನ್. ಕೆಲಸ ಮಾಡಲು ಆಗದಿದ್ದರೆ ರಾಜೀನಾಮೆ ಕೊಟ್ಟು ಹೋಗಲಿ’ ಎಂದು ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಜೆ.ನಿಶಾಂತ್ ಲೇವಡಿ ಮಾಡಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಹಿಂದಿನ ಶಾಸಕರ ಅನುದಾನಗಳಿಗೆ ಭೂಮಿ ಪೂಜೆ ಮಾಡುತ್ತಾ ದೊಡ್ಡ ಸಾಧನೆ  ಎಂದು ಬಿಬಿಸುತ್ತಿದ್ದಾರೆ. ಜನರಿಗೆ ತೊಂದರೆಮಾಡಿ ಬಸ್ ನಿಲ್ದಾಣ ಸ್ಥಳಾಂತರ ಮಾಡುವುದರ ಹಿಂದೆ ಏನ್ನೋ ಹುನ್ನಾರವಿದೆ. ಮುಖ್ಯರಸ್ತೆ ವಿಸ್ತರಣೆ ಮಾಡಿ, ಬಗರ್ ಹುಕುಂ ಅರ್ಜಿ ವಿಲೇವಾರಿ ಮಾಡಿ ಎಂದರು.

ಶಾಸಕರ ಕಾಟ ತಡೆಯಲಾರದೆ ಅಧಿಕಾರಿಗಳು ವರ್ಗಾವಣೆ  ಆಗುತ್ತಿದ್ದಾರೆ. ದೇಗುಲದ ವಂಶಪಾರಂಪಾರ್ಯ ಅಡ್ಡೆಗಾರರ ಬದಲಿಗೆ ಹೊಸ ನೇಮಕಕ್ಕೆ  ಟೆಂಡರ್ ಕರೆದಿರುವುದು ಸರಿಯಲ್ಲ ಎಂದರು.

ADVERTISEMENT

ಬೇಲೂರು-ಹಳೇಬೀಡು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸೈಯದ್ ತೌಫಿಕ್ ಮಾತನಾಡಿ,  ಬಸ್ ನಿಲ್ದಾಣ ಸ್ಥಳಾಂತರ ಮಾಡಲು ನಾವು ಬಿಡುವುದಿಲ್ಲ. ಹೊಸಬಡಾವಣೆ ನಿರ್ಮಿಸಲು ಅನುಮತಿ ನೀಡಬಾರದು ಎಂದು ಶಾಸಕರು ಪತ್ರ ಬರೆದಿದ್ದು, ಯಾವ ಮಾನದಂಡದಿಂದ ಎಂದು ತಿಳಿಸಲಿ ಎಂದರು.

ಕಾಂಗ್ರೆಸ್ ಮುಖಂಡ ಎಂ.ಆರ್.ವೆಂಕಟೇಶ್ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಗ್ಯಾರಂಟಿ ಯೋಜನೆ ಅಧ್ಯಕ್ಷ ಆನಂದ್ ದೇಶಾಣಿ, ಮುಖಂಡ ಮಹದೇವು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.