ADVERTISEMENT

ಚನ್ನರಾಯಪಟ್ಟಣ – ತುರುವೇಕೆರೆ ಬಸ್ ಮಾರ್ಗಕ್ಕೆ ಶಾಸಕರಿಂದ ಚಾಲನೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 13:06 IST
Last Updated 18 ಜೂನ್ 2025, 13:06 IST
ಹಿರೀಸಾವೆ ಹೋಬಳಿಯ ದಿಡಗ ಗ್ರಾಮದಲ್ಲಿ ಶಾಸಕ ಬಾಲಕೃಷ್ಣ ಚನ್ನರಾಯಪಟ್ಟಣ–ತುರುವೇಕೆರೆ ಮಾರ್ಗದ ಬಸ್‌ಗೆ ಬುಧವಾರ ಚಾಲನೆ ನೀಡಿದರು. ಮುಖಂಡರಾದ ಪುಟ್ಟರಾಜು, ವಾಸು, ಪುಟ್ಟಸ್ವಾಮಿ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು
ಹಿರೀಸಾವೆ ಹೋಬಳಿಯ ದಿಡಗ ಗ್ರಾಮದಲ್ಲಿ ಶಾಸಕ ಬಾಲಕೃಷ್ಣ ಚನ್ನರಾಯಪಟ್ಟಣ–ತುರುವೇಕೆರೆ ಮಾರ್ಗದ ಬಸ್‌ಗೆ ಬುಧವಾರ ಚಾಲನೆ ನೀಡಿದರು. ಮುಖಂಡರಾದ ಪುಟ್ಟರಾಜು, ವಾಸು, ಪುಟ್ಟಸ್ವಾಮಿ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು   

ಹಿರೀಸಾವೆ: ಚನ್ನರಾಯಪಟ್ಟಣದಿಂದ ತುರುವೇಕೆರೆ ಮಾರ್ಗದ ಬಸ್ ಸಂಚಾರಕ್ಕೆ ಶಾಸಕ ಸಿ.ಎನ್. ಬಾಲಕೃಷ್ಣ ಬುಧವಾರ ಹೋಬಳಿಯ ದಿಡಗ ಗ್ರಾಮದಲ್ಲಿ ಚಾಲನೆ ನೀಡಿದರು.

ಶಾಸಕರು ಮಾತನಾಡಿ, ಗಡಿ ಗ್ರಾಮಗಳ ಜನರು ಚನ್ನರಾಯಪಟ್ಟಣ ಮತ್ತು ತುರುವೇಕೆರೆ ಹೋಗಿ ಬರಲು ಸಾರಿಗೆ ಸೌಲಭ್ಯ ಕಲ್ಪಿಸುವಂತೆ ಹಲವು ವರ್ಷಗಳ ಬೇಡಿಕೆಯಾಗಿತ್ತು. ಅದರಂತೆ ಪ್ರತಿ ನಿತ್ಯ ಬೆಳಗ್ಗೆ ಮತ್ತು ಸಂಜೆ ಹಿರೀಸಾವೆ–ದಿಡಗ ಮಾರ್ಗವಾಗಿ ಬಸ್ ಸಂಚಾರ ಮಾಡಲಿದೆ. ಸುರಕ್ಷತೆ ದೃಷ್ಟಿಯಿಂದ ಸಾರ್ವಜನಿಕರು ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣ ಮಾಡಬೇಕು ಎಂದರು.

ಜೆಡಿಎಸ್ ಮುಖಂಡರಾದ ಡಿ.ತುಮಕೂರು ಪುಟ್ಟರಾಜು, ದಿಡಗ ವಾಸು, ಬೆಳಗೀಹಳ್ಳಿ ಪುಟ್ಟಸ್ವಾಮಿ ಮತ್ತಿತರರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.