ಹಾಸನ:‘ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿನಾಕಾರಣ ಸಿಲುಕಿಸಲಾಗಿದೆ. ಪ್ರಕರಣದ ಕುರಿತು ಸಂಪೂರ್ಣ ಓದಿದ್ದೇನೆ. ನನಗೆ ಕಾನೂನು ಹೋರಾಟ ಮಾಡಲು ಬಿಡಿ. ಗೆದ್ದು ಬರುತ್ತೇನೆ. ಇಲ್ಲವಾದರೆ, ನಿಮ್ಮ ಮನೆಯಲ್ಲಿ ಜೀತ ಮಾಡಲು ಸಿದ್ಧ’ ಎಂದು ಗೃಹ ಮಂಡಳಿ ಅಧ್ಯಕ್ಷ, ಶಾಸಕ ಕೆ.ಎಂ. ಶಿವಲಿಂಗೇಗೌಡ ಸವಾಲು ಹಾಕಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಭೂಮಿ ಇಲ್ಲದೇ ನಿವೇಶನ ಹಂಚಿಕೆಯ ನಿರ್ಣಯ ಮಾಡಲು, ನೋಂದಣಿ ಮಾಡಲು ಹೇಗೆ ಸಾಧ್ಯ? ಇದೆಲ್ಲ ಗೊತ್ತಿದ್ದರೂ ವಿರೋಧಿಗಳ ವಕೀಲರು ಇಲ್ಲಸಲ್ಲದ ವಕಾಲತ್ತು ಮಾಡಿದ್ದಾರೆ. ಇದರಿಂದ ಸಿದ್ದರಾಮಯ್ಯ ಹೊರಬರಲಿದ್ದಾರೆ. ಹಗರಣವನ್ನು ಸರ್ಕಾರ ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದರೂ ವಿರೋಧ ಪಕ್ಷಗಳು ಹೋರಾಡಲು ಹೊರಟಿರುವುದು ಹಾಸ್ಯಾಸ್ಪದ’ ಎಂದರು.
‘ಅರ್ಜಿ ಕಾನೂನು ಬದ್ಧವಾಗಿರುವುದರಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರನ ಟ್ರಸ್ಟ್‌ಗೆ ನಿವೇಶನ ನೀಡಲಾಗಿದೆ. ಎಂ.ಬಿ. ಪಾಟೀಲ ಸಚಿವರಾಗಿದ್ದರೂ ಈ ವಿಷಯದಲ್ಲಿ ಅಧಿಕಾರಿಗಳೇ ತೀರ್ಮಾನಿಸುತ್ತಾರೆ’ ಎಂದರು.
‘ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಆರ್.ವಿ. ದೇಶಪಾಂಡೆ ಹಲವು ಬಾರಿ ಸಚಿವರಾಗಿದ್ದವರು. ಹೀಗಾಗಿ ಮುಖ್ಯಮಂತ್ರಿಯಾಗುವ ಇಚ್ಛೆಯನ್ನು ಹೊರಹಾಕಿದ್ದಾರೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.