ADVERTISEMENT

ನಮ್ಮೂರು ಹಬ್ಬ: ಅಕ್ಕ–ತಂಗಿ ದೇವರ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 14:18 IST
Last Updated 16 ಏಪ್ರಿಲ್ 2025, 14:18 IST
ಹಿರೀಸಾವೆಯಲ್ಲಿ ಮಂಗಳವಾರ ರಾತ್ರಿ ಹೆಬ್ಬಾರಮ್ಮ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು
ಹಿರೀಸಾವೆಯಲ್ಲಿ ಮಂಗಳವಾರ ರಾತ್ರಿ ಹೆಬ್ಬಾರಮ್ಮ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು   

ಹಿರೀಸಾವೆ: ‘ನಮ್ಮೂರ ಹಬ್ಬ’ದ ಪ್ರಯುಕ್ತ ಚೌಡೇಶ್ವರಿ, ಹೆಬ್ಬಾರಮ್ಮ, ಎರಡು ರೀತಿಯ ಹೂಕೋಲಮ್ಮ, ಗುಡ್ಡಮ್ಮ, ಮಸಿಕಲ್ಲಮ್ಮ ಉತ್ಸವ ಮೂರ್ತಿಗಳ ಮೆರವಣಿಗೆ ಮಂಗಳವಾರ ರಾತ್ರಿ ನಡೆಯಿತು.

ಹಿರೀಸಾವೆ, ಹೊನ್ನೇನಹಳ್ಳಿ, ತೂಬಿನಕೆರೆ, ಸೋರೆಕಾಯಿಪುರ, ಬೆಳಗೀಹಳ್ಳಿ ಗ್ರಾಮಸ್ಥರು ಭಾಗವಹಿಸಿದ್ದರು.

ಈ ದೇವರಗಳ ತವರು ಮನೆಯಾದ ಹೊನ್ನೇನಹಳ್ಳಿ ಮತ್ತು ಹಿರೀಸಾವೆಯಲ್ಲಿರುವ ದೇವಿಯ ಮನೆತನದವರು ಮಡೆಗಳನ್ನು ಹೊಂಬಾಳೆಯಿಂದ ಶೃಂಗರಿಸಿ, ಊರ ಮುಂದಿನ ಕೆರೆಯಿಂದ ಉಯ್ಯಾಲೆ ಕಂಬದವರೆಗೆ ಹೆಬ್ಬಾರಮ್ಮ ದೇವರ ಹಿಂದೆ ಮೆರವಣಿಗೆ ಬಂದರು. ಎಲ್ಲ ದೇವರುಗಳನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿ ನಡೆಮುಡಿಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಉತ್ಸವ ನಡೆಸಿದರು.

ADVERTISEMENT

ಹರಕೆ ಹೊತ್ತ ಭಕ್ತರು ಬಾಯಿಗೆ ಬೀಗ, ಉರುಳು ಸೇವೆ ಮಾಡಿದರು. ಹೊಂಬಾಳೆಯನ್ನು ಪ್ರಸಾದವಾಗಿ ಸ್ವೀಕರಿಸಿದರು. ತಮಟೆ ನಾದಕ್ಕೆ ಜನರು ಕುಣಿದರು. ದೇವರುಗಳನ್ನು ಉಯ್ಯಾಲೆ ಆಡಿಸಿ, ಮೂಲ ಸ್ಥಾನಗಳಿಗೆ ಕಳುಹಿಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.