ನಂಜನಗೂಡು: ‘ಯುವಕರು ದುಶ್ಚಟಗಳಿಂದ ದೂರವಿದ್ದು, ವ್ಯಾಯಾಮ ನೀಡುವ ಸ್ವ ರಕ್ಷಣೆಯ ಕಲೆ ಕರಾಟೆಯನ್ನು ಕಲಿಯಬೇಕು. ಶಾಲಾ ಮಕ್ಕಳಿಗೆ ಕಡ್ಡಾಯವಾಗಿ ಕರಾಟೆ ತರಬೇತಿ ನೀಡಬೇಕು’ ಎಂದು ಸಮುದ್ರ ಇಂಗ್ಲಿಷ್ ಶಾಲೆಯ ಕಾರ್ಯದರ್ಶಿ ಶ್ರೀಕಾಂತ್ ಹೇಳಿದರು.
ನಗರದಲ್ಲಿ ಮಂಗಳವಾರ ನಡೆದ ಬೇಸಿಗೆ ಮುಕ್ತ ಕರಾಟೆ ಚಾಂಪಿಯನ್ ಶಿಪ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ತಮ್ಮ ಸ್ವರಕ್ಷಣೆಗಾಗಿ ಕರಾಟೆ ಕಲಿಯಬೇಕು. ಶಾಲೆಗಳಲ್ಲಿ ಮಕ್ಕಳಿಗೆ ಕರಾಟೆ ತರಬೇತಿ ನೀಡುವುದರಿಂದ ಮಕ್ಕಳು ಆರೋಗ್ಯವಂತವಾಗಿ ಬೆಳೆಯುತ್ತಾರೆ. ಬದುಕನ್ನು ಆತ್ಮವಿಶ್ವಾಸದಿಂದ ಎದುರಿಸಲು ಸಾದ್ಯವಾಗುತ್ತದೆ. ನಗರದಲ್ಲಿ ರೆನ್ಸಿ ಭರತೇಶ್ ಉತ್ತಮ ತರಬೇತಿ ನೀಡುತ್ತಿದ್ದಾರೆ. ಕರಾಟೆ ಪಟುಗಳು ಪಂದ್ಯದಲ್ಲಿ ಕ್ರೀಡಾ ಮನೋಭವ ಮೆರೆಯಬೇಕು ಎಂದು ಹೇಳಿದರು.
ತರಬೇತಿ ಪಡೆದ ಕರಾಟೆ ಪಟುಗಳಿಗೆ ಸಂಸ್ಥೆಯ ನಿರ್ದೇಶಕ ಎಸ್.ಸುನೀಲ್ ಕುಮಾರ್ ಸ್ಮರಣ ಫಲಕ ನೀಡಿ ಸನ್ಮಾನಿಸಿದರು. ಕರಾಟೆ ಪಟುಗಳು ಕಥಾಶ್‌ಗಳನ್ನು ಪ್ರದರ್ಶಿಸಿ ಪ್ರೇಕ್ಷಕರನ್ನು ರಂಜಿಸಿದರು.
ಲಯನ್ಸ್ ಸಂಸ್ಥೆ ಅಧ್ಯಕ್ಷ ಎನ್.ಉಮೇಶ್, ಪ್ರೊ.ಮಹೇಶ್ ಅತ್ತಿಖಾನೆ, ಪವನ್ ಕುಮಾರ್, ಡಿ.ಪ್ರಸನ್ನಕುಮಾರ್, ಎಂ.ಪ್ರದೀಪ್, ರೆನ್ಸಿ ಭರತೇಶ್, ಎಸ್.ಪಿ.ರಾಜೇಂದ್ರ ಪ್ರಸಾದ್, ಪಿ.ವಿಫುಲ್, ಬಿ.ರಾಜೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.