ಹಾಸನ: ರೋಗಿಗಳಿಗೆ ವೈದ್ಯರೇ ದೇವರು. ಅದೇ ರೀತಿ ವೈದ್ಯರಿಗೂ ರೋಗಿಗಳೇ ದೇವರು. ರೋಗಿಗಳನ್ನು ನಾವೆಲ್ಲರೂ ನಮ್ಮವರಂತೆ ಕಾಣಬೇಕು. ಸಾರ್ವಜನಿಕರೂ ವೈದ್ಯರು ಮತ್ತು ಆಸ್ಪತ್ರೆಯೊಂದಿಗೆ ಸಹಕರಿಸಬೇಕು ಎಂದು ಜನಪ್ರಿಯ ಆಸ್ಪತ್ರೆಯ ಮುಖ್ಯಸ್ಥ ಡಾ.ವಿ.ಕೆ ಅಬ್ದುಲ್ ಬಶೀರ್ ಹೇಳಿದರು.
ಜನಪ್ರಿಯ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ವೈದ್ಯರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯ, ಸ್ವಾತಂತ್ರ್ಯ ಹೋರಾಟಗಾರ, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಡಾ.ಬಿಧನ್ ಚಂದ್ರ ರಾಯ್ ಅವರ ಜನ್ಮದಿನೋತ್ಸವವನ್ನು ರಾಷ್ಟ್ರೀಯ ವೈದ್ಯರ ದಿನವಾಗಿ ಜುಲೈ 1 ರಂದು ಆಚರಿಸಲಾಗುತ್ತಿದೆ ಎಂದರು.
ಹಿರಿಯ ವೈದ್ಯ ಡಾ.ರಾಮ್ ಸ್ವರೂಪ್ ಮಾತನಾಡಿ, ವೈದ್ಯರು ರೋಗಿಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಬೇಕು, ನಾವೆಲ್ಲರೂ ನಿರಂತರ ಸೇವೆ ನೀಡಲು ಸಿದ್ಧವಿರಬೇಕು. ವೈದ್ಯರು ರೋಗಿಗಳನ್ನು ಪ್ರೀತಿಯಿಂದ ಮತ್ತು ಸೇವಾ ಮನೋಭಾವದಿಂದ ಕಾಣಬೇಕು. ಜಿಲ್ಲೆಯಲ್ಲಿ ಡಾ. ಬಶೀರ್ ನೇತೃತ್ವದಲ್ಲಿ ಜನಪ್ರಿಯ ಆಸ್ಪತ್ರೆಯು ಆರೋಗ್ಯ ಕ್ಷೇತ್ರದಲ್ಲಿ ಒಳ್ಳೆಯ ಸೇವೆ ನೀಡುತ್ತಿದೆ ಎಂದು ಹೇಳಿದರು.
ಜನಪ್ರಿಯ ಆಸ್ಪತ್ರೆ ವತಿಯಿಂದ ಡಾ. ರಾಮ್ ಸ್ವರೂಪ್ ಅವರನ್ನು ಗೌರವಿಸಲಾಯಿತು. ಶಸ್ತ್ರಚಿಕಿತ್ಸಾ ತಜ್ಞ ಡಾ. ಪ್ರವೀಣ್, ಜನರಲ್ ಫಿಜಿಷಿಯನ್ ಡಾ. ಮನೋಜ್ ಕುಮಾರ್, ಡಾ. ನಯನಾ, ಮೂಳೆ ತಜ್ಞ ಡಾ.ರಜತ್, ಸ್ತ್ರೀರೋಗ ತಜ್ಞೆ ಡಾ.ಸುಮಾ, ಮಕ್ಕಳ ತಜ್ಞ ಡಾ. ಭರತ್, ಅರವಳಿಕೆ ವೈದ್ಯ ಡಾ. ಸುಹಾಸ್, ನರರೋಗ ಶಸ್ತ್ರಚಿಕಿತ್ಸಕ ಡಾ.ಮ್ವೌಸಿನ್, ದಂತ ತಜ್ಞ ಡಾ.ಶೋಯೆಬ್, ಫಿಜಿಯೋಥೆರಪಿಸ್ಟ್ ಡಾ. ಸೈಯದ್ ನಹಿದ್, ನಿವಾಸಿ ವೈದ್ಯರಾದ ಡಾ.ಫೈಜಲ್, ಡಾ.ಲೋಹಿತ್, ವೈದ್ಯರು, ಆಡಳಿತ ಅಧಿಕಾರಿ ಮೊಹಮ್ಮದ್ ಕಿಸಾರ್, ಜನಪ್ರಿಯ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರವೀಣ್, ಡಾ. ದಯಾನಂದ್, ಸಾರ್ವಜನಿಕರು ಮತ್ತು ಆಸ್ಪತ್ರೆಯ ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.