ADVERTISEMENT

ಬಡ ಮಕ್ಕಳಿಗೂ ಇಂಗ್ಲಿಷ್ ಶಿಕ್ಷಣ ನೀಡಿ: ಶಾಸಕ ಶಿವಲಿಂಗೇಗೌಡ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2025, 13:30 IST
Last Updated 12 ಏಪ್ರಿಲ್ 2025, 13:30 IST
ಅರಸೀಕೆರೆ ತಾಲ್ಲೂಕಿನ ಬಾಣಾವಾರ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪಿಎಂ.ಶ್ರೀ ಮಕ್ಕಳ ಮನೆ ಶಾಲೆಯಲ್ಲಿ ಚಿಣ್ಣರ ಚಿಲಿಪಿಲಿ ಕಾರ್ಯಕ್ರಮವನ್ನು  ಶಾಸಕ ಶಿವಲಿಂಗೇಗೌಡ ಉದ್ಘಾಟಿಸಿದರು
ಅರಸೀಕೆರೆ ತಾಲ್ಲೂಕಿನ ಬಾಣಾವಾರ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪಿಎಂ.ಶ್ರೀ ಮಕ್ಕಳ ಮನೆ ಶಾಲೆಯಲ್ಲಿ ಚಿಣ್ಣರ ಚಿಲಿಪಿಲಿ ಕಾರ್ಯಕ್ರಮವನ್ನು  ಶಾಸಕ ಶಿವಲಿಂಗೇಗೌಡ ಉದ್ಘಾಟಿಸಿದರು    

ಅರಸೀಕೆರೆ: ಬಡ ಮಕ್ಕಳಿಗೂ ಇಂಗ್ಲಿಷ್ ಮಾಧ್ಯಮದಲ್ಲಿ ವಿದ್ಯಾಭ್ಯಾಸ ನೀಡಬೇಕು.  ಅದಕ್ಕಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ‘ಮಕ್ಕಳ ಮನೆ’ ಶಾಲೆಯಾಗಿಸಿ ಗುಣಮಟ್ಟದ ವಿದ್ಯಾಭ್ಯಾಸ ನೀಡಲಾಗುತ್ತಿದೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.

ಬಾಣಾವಾರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೇಂದ್ರ ಸರ್ಕಾರ ನೆರವಿನ ‘ಪಿಎಂಶ್ರೀ ಮಕ್ಕಳ ಮನೆ’ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ‘ಚಿಣ್ಣರ ಚಿಲಿಪಿಲಿ’  ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೆ.ಪಿ.ಎಸ್ ಶಾಲೆಗಳ ಸ್ಥಾಪನೆಗೆ  ಹಣವನ್ನು ಮೀಸಲಿಡಲಾಗಿದೆ ಎಂದರು.

ನಮ್ಮ ಕ್ಷೇತ್ರದಲ್ಲಿಯೇ ಪ್ರಥಮವಾಗಿ ಕೆ.ಪಿ.ಎಸ್ ಶಾಲೆ ಸ್ಥಾಪನೆಗೆ ಸರ್ಕಾರ ಮುಂದಾಗಿದ್ದು, ಶೀಘ್ರ ಕಾರ್ಯ ಆರಂಭವಾಗುತ್ತದೆ. ಎಲ್.ಕೆ.ಜಿ ಇಂದ  ಎಸ್.ಎಸ್.ಎಲ್.ಸಿ. ವರೆಗೂ ಒಂದೇ ಸೂರಿ ನರಿ  ಅತ್ಯುತ್ತಮವಾದ ವಿದ್ಯಾಭ್ಯಾಸ ನೀಡುವುದು ಇದರ ಗುರಿಯಾಗಿದೆ ಎಂದರು.

ADVERTISEMENT

ಇದುವರೆಗೂ ಬಾಣಾವರ ಪುರಸಭೆಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲಾಗಿದೆ. ತಾಲ್ಲೂಕು ಕೇಂದ್ರವೂ ಆಗಲಿದೆ. ಕ್ಷೇತ್ರದ ಅಭಿವೃದ್ಧಿ  ನನ್ನ ಗುರಿ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೀಣಾ ವಿಶ್ವನಾಥ್, ಬಿಇಒ ಮೋಹನ್ ಕುಮಾರ್, ಬಿ ಸಿ ಶ್ರೀನಿವಾಸ್, ಬಿ.ಎಂ. ಜಯಣ್ಣ, ಬಿ.ಆರ್.ಲಕ್ಷ್ಮಿಶ್,‌ ಬಿ.ರವಿಶಂಕರ್, ಬಿ.ಆರ್.ಸುರೇಶ್, ಬಿ.ಆರ್.ಶ್ರೀಧರ್, ಹಳ್ಳಿಕಾರ್ ಗೋವುಪ್ರೇಮಿಗಳ ಸಂಘದ ಅಧ್ಯಕ್ಷ ಧರ್ಮಣ್ಣ, ವೀಣಾ ಸುರೇಶ್, ಆಸಿಫ್, ಪಾಪ ಸ್ವಾಮಿ, ಉಪ ಪ್ರಾಂಶುಪಾಲ  ವಾಸುದೇವ್, ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ  ಪರಮೇಶ್, ಪಶುಪತಿ ರಾವ್, ಪಿಎಂಶ್ರೀ ಶಾಲೆಯ ಮುಖ್ಯಶಿಕ್ಷಕಿ ಸರೋಜಾ ನಿಂಬಣ್ಣನವರ್  ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.