ADVERTISEMENT

ಪುಲ್ವಾಮ ದಾಳಿ ಸಿ.ಎಂಗೆ ಗೊತ್ತಿತ್ತಂತೆ: ಸಿ.ಟಿ.ರವಿ ಲೇವಡಿ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2019, 16:24 IST
Last Updated 7 ಏಪ್ರಿಲ್ 2019, 16:24 IST
ಹಾಸನದ ಹುಣಸಿನಕೆರೆಯಲ್ಲಿ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಶಾಸಕ ಸಿ.ಟಿ.ರವಿ ಮಾತನಾಡಿದರು.
ಹಾಸನದ ಹುಣಸಿನಕೆರೆಯಲ್ಲಿ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಶಾಸಕ ಸಿ.ಟಿ.ರವಿ ಮಾತನಾಡಿದರು.   

ಹಾಸನ: ‘ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಗೆ ಪುಲ್ವಾಮ ದಾಳಿ ಬಗ್ಗೆ ಮಾಹಿತಿ ಇತ್ತು ಅಂತ ಹೇಳಿದ್ದಾರೆ. ಇಷ್ಟು ದಿನ ಅವರ ಬಗ್ಗೆ ತಪ್ಪು ತಿಳಿದುಕೊಂಡಿದ್ದೇವು’ ಎಂದು ಶಾಸಕ ಸಿ.ಟಿ.ರವಿ ವ್ಯಂಗ್ಯವಾಡಿದರು.

ಬಿಜೆಪಿ ಅಭ್ಯರ್ಥಿ ಎ.ಮಂಜು ಪರ ಹುಣಸಿನಕೆರೆಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ‘ಕುಮಾರಸ್ವಾಮಿ ಅವರು ಹಾಸನ, ಹೊಳೆನರಸೀಪುರ, ಮಂಡ್ಯಕಷ್ಟೇ ಸೀಮಿತ ಅಂದುಕೊಂಡಿದ್ದೇವು. ಪಾಕಿಸ್ತಾನದ ವರೆಗೂ ಸಂಬಂಧ ಬೆಳೆಸಿದ್ದಾರೆ. ಐಟಿ ದಾಳಿಯ ಮಾಹಿತಿ ದೊರೆತ ತಕ್ಷಣ ಮಾಧ್ಯಮಕ್ಕೆ ತಿಳಿಸಿದರು. ಅದೇ ರೀತಿ ಪುಲ್ವಾಮ ದಾಳಿ ವಿಚಾರವನ್ನು ಏಕೆ ಬಹಿರಂಗ ಪಡಿಸಲಿಲ್ಲ’ ಎಂದು ಲೇವಡಿ ಮಾಡಿದರು.

‘ದಾಳಿ ಬಗ್ಗೆ ಮೊದಲೇ ಮಾಹಿತಿ ನೀಡಿದ್ದರೆ ದೇಶದ ಸೈನಿಕರು ಉಳಿಯುತ್ತಿದ್ದರು. ಸೈನಿಕರು ಮೃತಪಟ್ಟಾಗ ಇಡೀ ದೇಶ ಕಣ್ಣೀರು ಹಾಕಿತು. ಆದರೆ ಸಿ.ಎಂ ಮಾತ್ರ ನಾಟಕದ ಕಣ್ಣೀರು ಹಾಕಿದರು. ದೇಶ ಗೆಲ್ಲಬೇಕು ಎಂದರೆ ಹಾಸನದಲ್ಲಿ ಬಿಜೆಪಿ ಗೆಲ್ಲಬೇಕು. ಇದು ಇಂಡಿಯಾ ಫೋರ್ಸ್ ಹಾಗೂ ಫ್ಯಾಮಿಲಿ ಫೋರ್ಸ್ ನಡುವಿನ ಚುನಾವಣೆ’ ಎಂದು ಬಣ್ಣಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.