ADVERTISEMENT

ಮುಂದುವರೆದ ಮಳೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2021, 4:12 IST
Last Updated 20 ಜುಲೈ 2021, 4:12 IST
ಹೆತ್ತೂರು ಸಮೀಪದ ಭತ್ತ ಗದ್ದೆಯಲ್ಲಿ ನಾಟಿ ಮಾಡಲು ಮಹಿಳೆಯರು ಭತ್ತದ ಸಸಿ ತೆಗೆಯುತ್ತಿರುವುದು
ಹೆತ್ತೂರು ಸಮೀಪದ ಭತ್ತ ಗದ್ದೆಯಲ್ಲಿ ನಾಟಿ ಮಾಡಲು ಮಹಿಳೆಯರು ಭತ್ತದ ಸಸಿ ತೆಗೆಯುತ್ತಿರುವುದು   

ಹೆತ್ತೂರು: ಹೋಬಳಿ ವ್ಯಾಪ್ತಿಯಲ್ಲಿ ಮಳೆ ಬಿರುಸುಗೊಂಡಿದ್ದು, ಸಾಧಾರಣವಾದರೂ ನಿರಂತರವಾಗಿದೆ.

ನಿರಂತರ ಮಳೆಯಿಂದ ಚಳಿ ವಾತಾವರಣ ಸೃಷ್ಟಿಯಾಗಿದ್ದು ಜನರು ಸ್ವೆಟರ್, ಟೋಪಿ ಹಾಕಿ ಓಡಾಡುತ್ತಿದ್ದಾರೆ. ನದಿ, ಹೊಳೆಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಕಳೆದ ಒಂದು ತಿಂಗಳಿನಿಂದ ರೈತರು ಭತ್ತದ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಭತ್ತದ ನಾಟಿಗಾಗಿ ಗದ್ದೆಗಳನ್ನು ಸಿದ್ಧವಾಗುತ್ತಿವೆ. ಸಮೀಪದ ಐಗೂರು, ಯಡಕೇರಿ,ಪಾಲಹಳ್ಳಿ ಹೊಳೆಯಲ್ಲಿ ನೀರಿನ ಪ್ರಮಾಣ ಏರಿಕೆಯಾಗುತ್ತಿದೆ. ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿದೆ.

ಯಳಸೂರು, ಹೆತ್ತೂರು ವ್ಯಾಪ್ತಿಯಲ್ಲಿ ಭತ್ತ ನಾಟಿ ಕಾರ್ಯ ಆರಂಭಗೊಂಡಿದೆ.

ADVERTISEMENT

ಕಳೆದ 24 ಗಂಟೆಯಲ್ಲಿ ಹೋಬಳಿಯ ವನಗೂರು ಪಂಚಾಯಿತಿ ವ್ಯಾಪ್ತಿಯ ಪಟ್ಲಾ, ಮಾಲ್ಮನೆ ಗ್ರಾಮದಲ್ಲಿ 9.75 ಸೆಂ.ಮೀ ಮಳೆಯಾಗಿದೆ ಎಂದು ಹೇಳಲಾಗಿದೆ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.