ADVERTISEMENT

ಹಾಸನ: ಸಕ್ರಿಯ ಪ್ರಕರಣ 430ಕ್ಕೆ ಏರಿಕೆ

ಹೊಸದಾಗಿ 73 ಜನರಿಗೆ ಕೊರೊನಾ ಸೋಂಕು

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2021, 15:46 IST
Last Updated 31 ಮಾರ್ಚ್ 2021, 15:46 IST

ಹಾಸನ: ಜಿಲ್ಲೆಯಲ್ಲಿ ಹೊಸದಾಗಿ 73 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಇದುವರೆಗೆ ಸೋಂಕಿತರ
ಸಂಖ್ಯೆ 29,470 ಏರಿಕೆಯಾಗಿದೆ.

430 ಸಕ್ರಿಯ ಪ್ರಕರಣಗಳ ಪೈಕಿ ತೀವ್ರ ನಿಗಾ ಘಟಕದಲ್ಲಿ 11 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರ
ಬಿಡುಗಡೆಯಾದ 38 ಮಂದಿ ಸೇರಿದಂತೆ ಇದುವರೆಗೆ 28,568 ರೋಗಿಗಳು ಗುಣಮುಖರಾಗಿ
ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕಾಯಿಲೆಯಿಂದ ಈವರೆಗೆ ಒಟ್ಟು 472 ಮಂದಿ ಮೃತರಾಗಿದ್ದಾರೆ.

ಹೊಸದಾಗಿ ಹಾಸನ ತಾಲ್ಲೂಕಿನಲ್ಲಿ 36 ಮಂದಿ, ಅರಸೀಕೆರೆ 12, ಚನ್ನರಾಯಪಟ್ಟಣ 14, ಅರಕಲಗೂಡು 2, ಬೇಲೂರು 3, ಹೊಳೆನರಸೀಪುರ 4, ಸಕಲೇಶಪುರ ತಾಲ್ಲೂಕಿನ ಇಬ್ಬರಿಗೆ ಕೋವಿಡ್‌ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಕುಮಾರ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.