ಹಾಸನ: ‘ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವ ಸದಸ್ಯರ ಸಭೆಯನ್ನು ಜಿಲ್ಲೆಯ ಹಳೇಬೀಡಿನ ಪುಷ್ಪಗಿರಿ ಮಠದಲ್ಲಿ ಸೆ.3 ರಂದು ಆಯೋಜಿಸಲಾಗಿದೆ’ ಎಂದು ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಮಲ್ಲೇಶ್ ಗೌಡ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಪರಿಷತ್ತಿನ ಕೇಂದ್ರ ಘಟಕದ ಅಧ್ಯಕ್ಷ ಮಹೇಶ್ ಜೋಷಿ, ಜಿಲ್ಲಾ ಘಟಕಗಳ ಪ್ರಮುಖರು ಸೇರಿ ಒಂದೂವರೆ ಸಾವಿರ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ’ ಎಂದರು.
‘ಇದೇ ಸಂದರ್ಭದಲ್ಲಿ ಸದಸ್ಯರ ನೋಂದಣಿ ಆಂದೋಲನವೂ ನಡೆಯಲಿದ್ದು, ಸದಸ್ಯತ್ವ ಪಡೆಯುವವರು ₹ 410 ಶುಲ್ಕ ಪಾವತಿಸಬೇಕು. ಸೈನಿಕರು ಹಾಗೂ ಅಂಗವಿಕಲರಿಂದ ಅರ್ಜಿ ಶುಲ್ಕ ₹ 10ನ್ನು ಮಾತ್ರ ಪಡೆಯಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.