ADVERTISEMENT

ಶ್ರವಣಬೆಳಗೊಳ: ಅಂತರರಾಷ್ಟ್ರೀಯ ಆಟದ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 13:37 IST
Last Updated 12 ಜೂನ್ 2025, 13:37 IST
ಶ್ರವಣಬೆಳಗೊಳದ ಶ್ರೀ ಅಂಬಿಕಾ ವಿದ್ಯಾಲಯದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಆಟದ ದಿನಾಚರಣೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು
ಶ್ರವಣಬೆಳಗೊಳದ ಶ್ರೀ ಅಂಬಿಕಾ ವಿದ್ಯಾಲಯದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಆಟದ ದಿನಾಚರಣೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು   

ಶ್ರವಣಬೆಳಗೊಳ: ಪ್ರತಿನಿತ್ಯ ಸಮಯಾವಕಾಶ ಮಾಡಿಕೊಂಡು ಮಕ್ಕಳು ಆಟಗಳನ್ನು ಆಡುವುದರಿಂದ ಮನಸ್ಸಿಗೆ ಉಲ್ಲಾಸ ಸಿಗುತ್ತದೆ. ಆರೋಗ್ಯವೂ ಉತ್ತಮವಾಗಿರುತ್ತದೆ ಎಂದು ಮುಖ್ಯ ಶಿಕ್ಷಕಿ ಸರೋಜಾ ಶೆಟ್ಟಿ ಬುಧವಾರ ಹೇಳಿದರು.

ಪಟ್ಟಣದ ಶ್ರೀ ಅಂಬಿಕಾ ವಿದ್ಯಾಲಯದ ಆವರಣದಲ್ಲಿ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಆಟದ ದಿನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶಿಕ್ಷಣ ಪಡೆಯುವುದರ ಜತೆಯಲ್ಲಿಯೇ ಕ್ರೀಡೆಯಲ್ಲಿಯೂ ಭಾಗವಹಿಸುವುದರಿಂದ ಭವಿಷ್ಯದಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಾಗಿ, ರಾಜ್ಯ, ದೇಶವನ್ನು ಪ್ರತಿನಿಧಿಸುವ ಸುವರ್ಣಾವಕಾಶಗಳು ಸಿಗುತ್ತವೆ ಎಂದು ಮಕ್ಕಳನ್ನು ಹುರಿದುಂಬಿಸಿದರು.

ADVERTISEMENT

ಅಂತರರಾಷ್ಟ್ರೀಯ ಆಟದ ನಿಮಿತ್ತ ಮಕ್ಕಳು ಬಣ್ಣದ ಉಡುಪುಗಳನ್ನು ಧರಿಸಿಕೊಂಡು ಬಂದಿದ್ದು ಗಮನ ಸೆಳೆಯಿತು. 

ಮಕ್ಕಳು ಆಟದ ಮೈದಾನದಲ್ಲಿ ಏರೋಬಿಕ್, ವಾಲಿಬಾಲ್, ಕಬಡ್ಡಿ, ಇನ್ನಿತರ ಆಟಗಳನ್ನು ಆಡಿ ಖುಷಿಪಟ್ಟರು. ಶಿಕ್ಷಕರಾದ ಬಾಹುಬಲಿ ಜೆ.ಎಸ್.ಪದ್ಮರಾಜ್, ಕಾವ್ಯಶ್ರೀ ಸಿ.ಆರ್, ಮಮತಾ, ಆಶಾರಾಣಿ, ದಿವ್ಯ, ಪೂರ್ಣಿಮಾ, ಶ್ರೀಧರ್, ಭೂಮಿಕಾ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.